ಬೆಟ್ಟಂಪಾಡಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಪಾಣಜೆ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಬೆಟ್ಟಂಪಾಡಿ ಇದರ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಗಳಿಸಿರುತ್ತದೆ. ಕಿರಿಯ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಈಶಾನ ಪ್ರಥಮ ಸ್ಥಾನ, ಕನ್ನಡ ಕಂಠ ಪಾಠದಲ್ಲಿ ಸಾಯಿ ಶ್ರೀಯಾಲಿ ಪ್ರಥಮ ಸ್ಥಾನ, ಭಕ್ತಿಗೀತೆ ಹಾಗೂ ಇಂಗ್ಲೀಷ್ ಕಂಠ ಪಾಠದಲ್ಲಿ ಆರ್ವಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಮಾತ್ರವಲ್ಲದೆ ಕಿರಿಯ ವಿಭಾಗದ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಲವೀಶ್ ತ್ರತೀಯ ಸ್ಥಾನ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಅಹಮದ್ ಮಿಸ್ಬಹ್ ತೃತೀಯ ಸ್ಥಾನ, ಕಥೆ ಹೇಳುವುದರಲ್ಲಿ ವಶಿನಿ ದ್ವಿತೀಯ ಸ್ಥಾನ, ದೇಶಭಕ್ತಿ ಗೀತೆಯಲ್ಲಿ ಶ್ರೀಹಾನ್ ದ್ವಿತೀಯ ಸ್ಥಾನ ಹಾಗೂ ಅಭಿನಯ ಗೀತೆಯಲ್ಲಿ ಉದ್ಧವಿ ಕೋಟ್ಯಾನ್ ತೃತೀಯ ಸ್ಥಾನ ಗಳಿಸಿರುತ್ತಾರೆ.

ಹಿರಿಯ ಪ್ರಾಥಮಿಕ ವಿಭಾಗದ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಪ್ರಾಪ್ತಿ ಬೋರ್ಕರ್ ಪ್ರಥಮ ಸ್ಥಾನ, ಆಶುಭಾಷಣ ಸ್ಪರ್ಧೆಯಲ್ಲಿ ವೈಷ್ಣವಿ ಪ್ರಥಮ ಸ್ಥಾನ, ಕವನ ವಾಚನದಲ್ಲಿ ಶ್ರೀರಕ್ಷ ಭಟ್ ಪ್ರಥಮ ಸ್ಥಾನ, ಇಂಗ್ಲಿಷ್ ಕಂಠ ಪಾಠದಲ್ಲಿ ಅದ್ವೈತ ತಿರುಮಲೇಶ ಪ್ರಥಮ ಸ್ಥಾನ, ಪ್ರಬಂಧ ರಚನೆಯಲ್ಲಿ ಆಪ್ತಿ ಎಸ್ ರೈ ಪ್ರಥಮ ಸ್ಥಾನ, ಚಿತ್ರಕಲೆಯಲ್ಲಿ ಎಸ್ ಪೂರ್ವಿಕ್ ಪ್ರಥಮ ಸ್ಥಾನ ,ದೇಶಭಕ್ತಿ ಗೀತೆಯಲ್ಲಿ ಚಿರಾಗ್ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಅಲ್ಲದೇ ಹಿರಿಯ ವಿಭಾಗದ ಭಕ್ತಿ ಗೀತೆಯಲ್ಲಿ ಚೇತಸ್ ಶರ್ಮ ದ್ವಿತೀಯ ಸ್ಥಾನ, ಮಿಮಿಕ್ರಿಯಲ್ಲಿ ಯಶ್ವಿನ್ ದ್ವಿತೀಯ ಸ್ಥಾನ, ಕನ್ನಡ ಕಂಠಪಾಠದಲ್ಲಿ ಅರ್ನವಿ ಘಾಟೆ ತೃತಿಯ ಸ್ಥಾನ, ಕಥೆ ಹೇಳುವುದರಲ್ಲಿ ಇಹಾನಿ ಶೆಟ್ಟಿ ತೃತೀಯ ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯಗುರು ರಾಜೇಶ್ ಎನ್, ಆಡಳಿತ ಮಂಡಳಿ ಹಾಗೂ ಪೋಷಕ ವರ್ಗದವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.