ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿಗೆ ಒಳಪಡುವ ಗ್ರಾಮಗಳಿಗೆ ಬಿಡುಗಡೆಯಾದ ಅನುದಾನ ಬಿಡುಗಡೆಯಾಗಿದೆ. ಅಳಿಕೆ ಗ್ರಾಮದ ಸ.ಹಿ.ಪ್ರಾ ಶಾಲೆ ವಿದ್ಯಾವಿಹಾರ ಕಲ್ಲೆಜೇರ ಶಾಲಾ ಕೊಠಡಿ ದುರಸ್ಥಿಗೆ 2.50 ಲಕ್ಷ ರೂ ,ಸ.ಕಿ.ಪ್ರಾಥಮಿಕ ಶಾಲೆ ತೋರಣಕಟ್ಟೆ ಅಭಿವೃದ್ಧಿಗೆ 2.50 ಲಕ್ಷ ರೂ, ವಿಟ್ಲ ಪಟ್ಟಣ ಪಂಚಾಯತ್ ಶಿವಾಜಿ ನಗರ ಅಂಗನವಾಡಿ ಆವರಣಗೋಡೆ ರಚನೆಗೆ 2.0 ಲಕ್ಷ ರೂ, ಅಳಿಕೆ ಗ್ರಾಮದ ಮುಳಿಯ ಅಂಗನವಾಡಿ ಕಟ್ಟಡ ಕಾಮಗಾರಿಗೆ 3.0 ಲಕ್ಷ ರೂ, ಮಾಣಿಲ ಗ್ರಾಮ ಪಂಚಾಯತ್ ಗ್ರಂಥಾಲಯದ ಪೀಠೋಪಕಣ ಖರೀದಿಗೆ 1.50 ಲಕ್ಷ ರೂ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತೋರಣಕಟ್ಟೆ ಶಾಲಾ ಗ್ರಂಥಾಲಯ ಪೀಠೋಪಕರಣಕ್ಕೆ 1.50 ಲಕ್ಷ ರೂ, ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ ಅಭಿವೃದ್ಧಿಗೆ 3.0 ಲಕ್ಷ ರೂ, ಕುಳ ಗ್ರಾಮದ ಪಿಳಿಪೆ – ಮಾರ್ಪು-ಕೆಮನಾಜೆ ರಸ್ತೆ ಅಭಿವೃದ್ಧಿಗೆ 3.0 ಲಕ್ಷ ರೂ, ಅಳಿಕೆ ಗ್ರಾಮದ ಬೈರಿಕಟ್ಟೆ ಎಸ್.ಟಿ ಕಾಲೋನಿ ಹೈ ಮಾಸ್ಟ್ ಲೈಟ್ ಅಳವಡಿಕೆಗೆ 1.25 ಲಕ್ಷ ರೂ, ಕೆದಿಲ ಗ್ರಾಮದ ಪಾಟ್ರುಕೋಡಿ ಎಸ್.ಟಿ ಕಾಲೋನಿ ಹೈ ಮಾಸ್ಟ್ ಲೈಟ್ ಅಳವಡಿಕೆಗೆ 1.25 ಲಕ್ಷ ರೂ, ಇಡ್ಕಿದು ಗ್ರಾಮದ ಅಳಕೆಮಜಲು ಎಸ್.ಸಿ ಕಾಲೋನಿ ಹೈ ಮಾಸ್ಟ್ ಲೈಟ್ ಅಳವಡಿಕೆಗೆ 1.35 ಲಕ್ಷ ರೂ, ಕೇಪು ಗ್ರಾಮದ ಪಂಜಿಕಲ್ಲು ಎಸ್.ಸಿ ಕಾಲೋನಿ ಹೈ ಮಾಸ್ಟ್ ಲೈಟ್ ಅಳವಡಿಕೆಗೆ 1.35 ಲಕ್ಷ ರೂ, ಕೆದಿಲ ಗ್ರಾಮದ ಕಲ್ಲಾಜೆ ಎಂಕ ಬೈರ ಎಸ್.ಟಿ ಕಾಲೋನಿ ಹೈ ಮಾಸ್ಟ್ ಲೈಟ್ ಅಳವಡಿಕೆಗೆ 1.40 ಲಕ್ಷ ರೂ,ಪುಣಚ ಗ್ರಾಮದ ಎಮೇತ್ತೊಟ್ಟಿ ಹೈ ಮಾಸ್ಟ್ ಲೈಟ್ 1.40 ಲಕ್ಷ ರೂ,ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಬೊಳಂತಿಮೊಗ್ರು ಇಲ್ಲಿಗೆ ಪೀಠೋಪಕರಣಕ್ಕೆ 1.0 ಲಕ್ಷ ರೂ, ಬಂಟ್ವಾಳ ತಾಲೂಕು ಪುಣಚ ಗ್ರಾಮ ತೋರಣಕಟ್ಟೆ ಅಂಗನವಾಡಿ ಅಭಿವೃದ್ಧಿ ಕಾಮಗಾರಿಗೆ 2.0 ಲಕ್ಷ ರೂ,ಮಾಣಿಲ ಗ್ರಾಮ ಸೂರಂಪಳ್ಳ ಅಂಗನವಾಡಿ ಅಭಿವೃದ್ಧಿ ಕಾಮಗಾರಿಗೆ 2.0 ಲಕ್ಷ ರೂ, ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಅಭಿವೃದ್ಧಿ ಕಾಮಗಾರಿಗೆ 3.0 ಲಕ್ಷ ರೂ, ವಿಟ್ಲ ಮುಡ್ನುರು ಗ್ರಾಮ ಪಿಲಿಂಜ ಪರಿಶಿಷ್ಟ ಜಾತಿ ಕಾಲೋನಿ ಬಳಿ ಮೋರಿ ರಚನೆಗೆ 1.25 ಲಕ್ಷ ರೂ, ಬಂಟ್ವಾಳ ತಾಲೂಕು ಕುಳ ಗ್ರಾಮದ ಕಳ್ಲಂತಡ್ಕ ಪರಿಶಿಷ್ಟ ಜಾತಿ ಕಾಲೋನಿ ಹೈ ಮಾಸ್ಟ್ ಲೈಟ್ ಅಳವಡಿಕೆಗೆ 1.25 ಲಕ್ಷ ರೂ, ಅಳಿಕೆ ಗ್ರಾಮದ ಆನೇಪದವು ಪರಿಶಿಷ್ಟ ಪಂಗಡ ಕಾಲೋನಿ ಬಳಿ ಹೈಮಾಸ್ಟ್ ಅಳವಡಿಕೆಗೆ 1.25 ಲಕ್ಷ ರೂ, ಬಂಟ್ವಾಳ ತಾಲೂಕು ಪುಣಚ ಗ್ರಾಮದ ಮಹಮ್ಮಾಯಿ ಮರಾಟಿ ಸೇವಾ ಪರಿಶಿಷ್ಟ ಪಂಗಡ ಸಂಘ ಬಳಿ ಹೈಮಾಸ್ಟ್ ಅಳವಡಿಕೆಗೆ 1.25 ಲಕ್ಷ ರೂ, ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಅಡ್ಕಹಿತ್ಲು ಪರಿಶಿಷ್ಟ ಪಂಗಡ ಕಾಲೋನಿ ಹೈ ಮಾಸ್ಟ್ ಲೈಟ್ ಅಳವಡಿಕೆ 1.25 ಲಕ್ಷ ರೂ,ಪುಣಚ ಗ್ರಾಮ ಮಣಿಲ ನಾರ್ಣಡ್ಕ ದಂಬೆ ಶಾಲೆ ಬಳಿ ಪರಿಶಿಷ್ಟ ಪಂಗಡ ಕಾಲೋನಿ ಬಳಿ ಹೈಮಾಸ್ಟ್ ಅಳವಡಿಕೆಗೆ 1.25 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.
