ಪುತ್ತೂರು: ರೋಟರಿ ಕ್ಲಬ್ ಉಪ್ಪಿನಂಗಡಿ ಮತ್ತು 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ಗಳ ಸಂಯುಕ್ತ ಆಶ್ರಯದಿಂದ ಕೈಗೊಂಡ “ರೋಟರಿ ಬೆಳಕು ಯೋಜನೆ” ಉಪ್ಪಿನಂಗಡಿ ಯೂನಿಕ್ ಇಂಡಸ್ಟ್ರೀಸ್ ಬಳಿಯಲ್ಲಿ ಉದ್ಘಾಟನೆಗೊಂಡಿತು.

ರೋಟರಿ ಜಿಲ್ಲಾ ಗವರ್ನರ್ ಖಣಟಿ ರಾಮಕೃಷ್ಣ ಪಿ.ಕೆ.ರವರು ಅನಾವರಣಗೊಳಿಸಿದರು. ಅಸಿಸ್ಟೆಂಟ್ ಗವರ್ನರ್ ಖಣಟಿ ಡಾ. ರಾಜಾರಾಮ್ ಕೆ.ಬಿ, ಹಿರಿಯರಾದ ಅಬ್ಬುಲ್ ಹಮೀದ್ ಯುನಿಕ್, 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಶಾಂತ್, ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಜಾನ್ ಕೇನ್ಯೂಟ್, ಕಾರ್ಯದರ್ಶಿ ಶ್ರೀಕಾಂತ್ ಪಟೇಲ್, ರೊಟೇರಿಯನ್ಗಳಾದ ಚಂದಪ್ಪ ಮೂಲ್ಯ, ಜಗದೀಶ್ ನಾಯಕ್, ಸ್ವರ್ಣೇಶ್ ಗಾಣಿಗ, ರಾಜೇಶ್ ದಿಂಡಿಗಲ್, ಗುಣಕರ ಅಗ್ನಾಡಿ, ನೀರಜ್ ಕುಮಾರ್, ನವೀನ್ ಬ್ರ್ಯಾಗ್, ರಾಜಶೇಖರ್ ಶೆಟ್ಟಿ, ಪ್ರದೀಪ್, ಅನುರಾಧ ಶೆಟ್ಟಿ, ಆಶಾಲತಾ ನಾಯಕ್, ಅಬ್ದುಲ್ ರಹಿಮಾನ್ ಯುನಿಕ್, ಡಾ. ರಮ್ಯಾ ರಾಜಾರಾಮ್, ಈಶ್ವರ್ ಹನೀಪ್ ಡೆಲ್ಮ, ನೇತ್ರಾವತಿ ಅಟೋ ಚಾಲಕರ ಮತ್ತು ಮೂಲಕರ ಸಂಘದ ಕೋಶಾಧಿಕಾರಿ ಕಲಂದರ್ ಶಾಫಿ, ಸಾದಿಕ್ ಆದರ್ಶನಗರ, ಗ್ಯಾರಂಟಿ ಯೋಜನೆಯ ಸದಸ್ಯ ಶೇಶಪ್ಪ ನೆಕ್ಕಿಲು, ಉಪ್ಪಿನಂಗಡಿ ಮಾದರಿ ಶಾಲೆಯ Sಆಒಅ ಅಧ್ಯಕ್ಷ ಮಜೀದ್ ಕುದ್ಲೂರು ಸೇರಿದಂತೆ ಅನೇಕರು ಭಾಗವಹಿಸಿದ್ದರು.