ಪುತ್ತೂರು ಪ್ರಕಾಶ್ ಫೂಟ್‌ವೇರ್‌ನಿಂದ ಕಳ್ಳತನ – ಇನ್ನೋವ ಕಾರು ಖರೀದಿಗೆಂದು ಇಟ್ಟಿದ್ದ ಲಕ್ಷಾಂತರ ರೂಪಾಯಿ ನಗದು ಕಳವು

ಪುತ್ತೂರು: ಪುತ್ತೂರು ಮುಖ್ಯರಸ್ತೆಯಲ್ಲಿರುವ ಪ್ರಕಾಶ್ ಫೂಟ್‌ವೇರ್ ಅಂಗಡಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಘಟನೆ ಸೆ.16ರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರಕಾಶ್ ಫೂಟ್‌ವೇರ್ ಸಂಸ್ಥೆಯ ಮಾಲಕರು ಇನ್ನೋವ ಕಾರು ಖರೀದಿಗೆಂದು ರೂ. 15ಲಕ್ಷವನ್ನು ಡ್ರಾವರ್‌ನಲ್ಲಿ ತೆಗೆದಿಟ್ಟದ್ದು, ಕಳ್ಳರು ಅದೇ ಹಣವನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಸಂಸ್ಥೆಯ ಮಾಲಕ ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.