ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕಿಗೆ ಪ್ರಯಾಣಿಕನಿಂದ ಹಲ್ಲೆ

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನಿರ್ವಾಹಕಿಯೋರ್ವರಿಗೆ ಪ್ರಯಾಣಿಕನೋರ್ವ ಬಸ್ಸಲ್ಲಿಯೇ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.ಮಂಗಳೂರು-ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕರ್ತವ್ಯ ನಿರತರಾಗಿದ್ದ ನಿರ್ವಾಹಕಿ ವಿಜಯ ಎಂಬವರಿಗೆ ಅದೇ ಬಸ್ಸಲ್ಲಿದ್ದ ಪ್ರಯಾಣಿಕ ಹಸನ್ ಎಂಬಾತ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.ಫೆ.೨೦ರಂದು ಸಂಜೆ ಇಲ್ಲಿನ ಮಹಾವೀರ ಆಸ್ಪತ್ರೆ ಬಳಿ ಘಟನೆ ನಡೆದಿದೆ. ಬಸ್ಸಲ್ಲಿದ್ದ ವಿಕಲಾಂಗ ಪ್ರಯಾಣಿಕರೋರ್ವರಿಗೆ ಸೀಟು ಬಿಟ್ಟುಕೊಡುವಂತೆ ಕೇಳಿದಾಗ ಆಕ್ಷೇಪಿಸಿದ ಆರೋಪಿ ನನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿ, ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ನಿರ್ವಾಹಕಿ ವಿಜಯ ಆರೋಪಿಸಿದ್ದಾರೆ.ಪೊಲೀಸರಿಗೆ ಮಾಹಿತಿ ನೀಡಲಾಗಿದೆ. 24 … Continue reading ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕಿಗೆ ಪ್ರಯಾಣಿಕನಿಂದ ಹಲ್ಲೆ