18-04-2025
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೭.೩೦ಕ್ಕೆ ಕವಾಟೋದ್ಘಾಟನೆ, ೮.೩೦ರಿಂದ ತುಲಾಭಾರ ಸೇವೆ, ಸಂಜೆ ೩.೩೦ಕ್ಕೆ ವೀರಮಂಗಲ ಅವಭೃತ ಸ್ನಾನಕ್ಕೆ ಸವಾರಿ
ಕುಂತೂರುಪದವು ರಾಮಡ್ಕದಲ್ಲಿ ಬೆಳಿಗ್ಗೆ ೯.೫೭ಕ್ಕೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಲೋಕಾರ್ಪಣೆ, ೧೦ರಿಂದ ಭಜನೆ, ಸಂಜೆ ೪.೪೫ರಿಂದ ಕುಣಿತ ಭಜನೆ, ೫ರಿಂದ ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾ ನಮಸ್ಕಾರ ಪೂಜೆ, ರಾತ್ರಿ ೭.೧೫ರಿಂದ ಧಾರ್ಮಿಕ ಸಭೆ, ೯.೩೦ರಿಂದ ಮಾರ್ನೆಮಿ ತುಳು ನಾಟಕ
ಕೊಡಿನೀರು ಕರೆಮನೆಕಟ್ಟೆಯಲ್ಲಿ sಸಂಜೆ ೬ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಅನ್ನಸಂತರ್ಪಣೆ, ೯ರಿಂದ ಯಕ್ಷಗಾನ ಬಯಲಾಟ
ಕಡಬ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ೯.೪೬ಕ್ಕೆ ಶ್ರೀ ದೇವರ ಬಿಂಬಪ್ರತಿಷ್ಠಾ, ಅಷ್ಟಬಂಧಸ್ಥಾಪನ, ಜೀವಕಲಶಾಭಿಷೇಕ, ಶಿಖರಕಲಶ ಪ್ರತಿಷ್ಠಾ ಅಭಿಷೇಕ, ಕವಾಟಬಂಧನ, ದಿಕ್ಪಾಲಶಿಲಾಧಿವಾಸ ಪ್ರತಿಷ್ಠಾ, ಮಧ್ಯಾಹ್ನ ೧ರಿಂದ ಕೊಳಲು ವಾದನ, ಸಂಜೆ ೬ರಿಂದ ಶ್ರೀ ಚಂಡೀಸಪ್ತಶತೀಪಾರಾಯಣ, ಶ್ರೀ ದುರ್ಗಾನಮಸ್ಕಾರ ಪೂಜೆ, ೭.೩೦ರಿಂದ ನೃತ್ಯಾರ್ಪಣ, ರಾತ್ರಿ ೯ರಿಂದ ಭಕ್ತಿ ರಸಮಂಜರಿ
ಬಂಟ್ವಾಳ ತಾಲೂಕು ಉಳಿಗ್ರಾಮ ಕಕ್ಯಗುತ್ತು ಅಂಚನ್ ಕುಟುಂಬಸ್ಥರ ಮೂಲ ಚಾವಡಿಯಲ್ಲಿ ಬೆಳಿಗ್ಗೆ ಗಣಹೋಮ, ೯ರಿಂದ ವೆಂಕಟರಮಣ ದೇವರ ಹರಿಸೇವೆ, ದೈವಗಳಿಗೆ ಪರ್ವಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೪ರಿಂದ ದೈವಗಳ ನೇಮೋತ್ಸವ
ಶುಭಾರಂಭ
ಉಪ್ಪಿನಂಗಡಿ ಹಳೆಬಸ್ಸ್ ನಿಲ್ದಾಣದ ಬಳಿ ಹೋಟೆಲ್ ಫಿಶ್‌ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಸ್ಥಳಾಂತರಗೊಂಡು ಶುಭಾರಂಭ
ಶುಭವಿವಾಹ
ಮಾಣಿ ನೇರಳಕಟ್ಟೆ ಇಂಡಿಯನ್ ಅಡಿಟೋರಿಯಂನಲ್ಲಿ ಸಂಜೆ ಪರ್ಲಡ್ಕ ಬಾಲವನ ಮೊಹಮ್ಮದ್ ರಫೀಕ್ ದರ್ಬೆಯವರ ಪುತ್ರಿ ಫಾತಿಮತ್ ಅಶ್ಮಿಲ್ಲಾ ಮತ್ತು ಮುಂಡೂರು ಅಜ್ಜಿಕಟ್ಟೆ ಹಸನ್‌ರವರ ಪುತ್ರ ಆಸಿಫ್‌ರವರ ವಿವಾಹ