ಸೆ.2ರಂದು ರಾತ್ರಿ ನಿಧನರಾಗಿರುವ ಖ್ಯಾತ ಭಾಷಾ ವಿಜ್ಞಾನಿ ಹಾಗೂ ಸಾಹಿತಿ ಪ್ರೊ। ಕೋಡಿ ಕುಶಾಲಪ್ಪ ಗೌಡರಿಗೆ ಗೌಡರ ಯುವ ಸೇವಾ ಸಂಘದಿಂದ ಶ್ರದ್ಧಾಂಜಲಿ ಸಭೆಯು ಸೆ.5ರಂದು ಸಂಜೆ ಗಂಟೆ 4 ಕ್ಕೆ ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.