ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಸೆ.18 ರಂದು ಒಡಿಯೂರು ಗ್ರಾಮವಿಕಾಸ ಯೋಜನೆಯ ಬೆಳ್ಳಾರೆ ಘಟ ಸಮಿತಿಯಿಂದ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸೇವಾ ದೀಕ್ಷಿತೆಯಾದ ಆಶಾ, ಜ್ಯೋತಿ, ಬೆಳ್ಳಾರೆ ಘಟಸಮಿತಿಯ ಅಧ್ಯಕ್ಷರು, ಸಂಘದ ಸದಸ್ಯರು ಮತ್ತು ದೇವಸ್ಥಾನದ ಸಿಬ್ಬಂದಿಯವರು ಉಪಸ್ಥಿತರಿದ್ದರು.