ಪುತ್ತೂರು: ದರ್ಬೆ ಸಿ.ಟಿ.ಒ ರಸ್ತೆ ಬಳಿಯ ನಿವಾಸಿ, ನಿವೃತ್ತ ಸೈನಿಕರಾಗಿದ್ದ ಎಝಿಲ್ ಡಿ’ಸೋಜ(81ವ.)ರವರು ದೀರ್ಘಕಾಲದ ಅಸೌಖ್ಯದಿಂದ ಮೇ 12 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಮೃತ. ಎಝಿಲ್ ಢಿ’ಸೋಜರವರು ಆರ್ಮಿ(E.M.E,)ಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ 1981ರಲ್ಲಿ ನಿವೃತ್ತರಾಗಿದ್ದರು. ಆರ್ಮಿಯಿಂದ ನಿವೃತ್ತರಾದ ಬಳಿಕ ಅವರು ಬೊಳ್ವಾರಿನಲ್ಲಿ ಅಂದು ಕಾರ್ಯಾಚರಿಸುತ್ತಿದ್ದ ಗ್ರೇಟ್ ಇಂಡಿಯಾ ಫೈನಾನ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ ಅಲ್ಲದೆ ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ ಕ್ಲಬ್ ನ ಸದಸ್ಯರಾಗಿರುತ್ತಾರೆ. ಮೃತರು ಪತ್ನಿ ಸ್ಟೆಲ್ಲಾ ಡಿ’ಸೋಜ,ಈರ್ವರು ಪುತ್ರರು, ಪುತ್ರಿ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.