ಕಾಣಿಯೂರು: ಕಾಣಿಯೂರಿನ ಬೈತಡ್ಕದಲ್ಲಿ ಹೊಳೆಗೆ ಬಿದ್ದ ಕಾರನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ಮತ್ತೆ ಕಾರು ಹೊಳೆಗೆ ಬಿದ್ದಿದೆ. ಜು.9ರಂದು ರಾತ್ರಿ ಬೈತಡ್ಕದಲ್ಲಿ ಕಾರೊಂದು ಹೊಳೆಗೆ ಬಿದ್ದಿರುವ ಘಟನೆ ನಡೆದಿತ್ತು. ನೀರುಪಾಲಾಗಿರುವ ಕಾರನ್ನು ಅಗ್ನಿಶಾಮಕ ದಳದವರು ಹುಡುಕಾಟ ನಡೆಸುತ್ತಿರುವಾಗ ಪತ್ತೆಯಾದ ಕಾರನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಪುನಃ ಕಾರು ಹೊಳೆಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಮುಂದೆ ಹೋಗಿದೆ. ಇದೀಗ ಮತ್ತೆ ಕಾರನ್ನು ಹುಡುಕಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.