ಪುಣಚ: ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ 20 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ವೇ.ಮೂ. ಸುಬ್ರಾಯ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಆ.5 ರಂದು ಶ್ರೀದೇವಿ ಭವನದಲ್ಲಿ ನಡೆಯಿತು. ಬೆಳಿಗ್ಗೆ 8 ರಿಂದ ಭಜನಾ ಕಾರ್ಯಕ್ರಮ, ಪೂಜಾರಂಭ ನಂತರ ಸಭಾಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮ: ಪುಣಚ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಲಾವಣ್ಯ ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅಥಿತಿಗಳಾಗಿ ತೆಂಕಿಲ ವಿವೇಕಾನಂದ ಕ.ಮಾ. ಶಾಲೆಯ ಶಿಕ್ಷಕಿ ವೀಣಾ ಸರಸ್ವತಿ ಭಾಗವಹಿಸಿದ್ದರು. ಶ್ರೀದೇವಿ ಪ್ರೌಢ ಶಾಲಾ ನಿವ್ರತ್ತ ಮುಖ್ಯ ಶಿಕ್ಷಕಿ ಗಂಗಮ್ಮ ಹರಿಕೃಷ್ಣರವರನ್ನು ಸನ್ಮಾನಿಸಲಾಯಿತು. ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ಪವಿತ್ರಾ ಹರೀಶ್ ಸ್ವಾಗತಿಸಿ, ಪುಣಚ ದೇವಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ರಜನಿ ವಂದಿಸಿದರು. ಮಧ್ಯಾಹ್ನ ಮಹಾ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.