ಕಿಲ್ಲೆ ಮೈದಾನದಲ್ಲಿ 65ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ

ಪುತ್ತೂರು: ಶ್ರೀದೇವತಾ ಸಮಿತಿ ಪುತ್ತೂರು ಇದರ ವತಿಯಿಂದ 65ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಕಾರ್ಯಕ್ರಮ ಆ.31ರಿಂದ ಆರಂಭಗೊಂಡಿದೆ.  ಬೆಳಗ್ಗೆ ಸಾಯಿ ಮಂದಿರದಿಂದ ಹೊರಟು ಕಿಲ್ಲೆ ಮೈದಾನದ ಮಂಟಪದಲ್ಲಿ ಶ್ರೀಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.