ಪುತ್ತೂರು: ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜು ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್ನ ವಿದ್ಯಾರ್ಥಿಗಳು ಯೂಥ್ ಐಡಿಯಾತೋನ್ ಸ್ಪರ್ಧೆ 2022 ರಲ್ಲಿ ಭಾಗವಹಿಸಿ ಅಡಿಕೆ ಕೃಷಿಗೆ ಸಂಬಂಧಿಸಿದ ಅರೆಕಾ ಅಗ್ರಿಟೆಕ್ ಎಂಬ ಯೋಜನೆಯ ಟಾಪ್ 1000 ವಿದ್ಯಾರ್ಥಿಗಳ ನಡುವೆ ಆಯ್ಕೆಯಾಗಿ, ಮುಂದಿನ ಹಂತದ ಟಾಪ್ ಟೆನ್ನಲ್ಲಿ ಆಯ್ಕೆಯಾಗಿಸ್ಪೆಷಲ್ ಮೆನ್ಷನ್ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಈ ಯೋಜನೆಯನ್ನು ಅಟಲ್ ಟಿಂಕರಿಂಗ್ ಲ್ಯಾಬ್ ನ ನೋಡಲ್ ಶಿಕ್ಷಕಿಯಾದ ಸಿಂಧು.ವಿ.ಕೆ. ಹಾಗೂ ಐ.ಟಿ. ಉಪಾನ್ಯಾಸಕರಾದ ಆಶ್ಲೇಷ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ತಯಾರಿಸಿರುತ್ತಾರೆ. ಯೂತ್ ಐಡಿಯಾತೋನ್ ಎನ್ನುವುದು ವಿದ್ಯಾರ್ಥಿಗಳಿಗೆ, ಮಾರ್ಗದರ್ಶಕ ಶಿಕ್ಷಕರಿಗೆ ಹಾಗೂ ಶಾಲೆಗಳಿಗಾಗಿ ಇರುವ ನಾಲ್ಕು ಹಂತದ ವಿಜ್ಞಾನದ ಸ್ಪರ್ಧೆಯಾಗಿದ್ದು ಆಕರ್ಷಕ ಬಹುಮಾನಗಳನ್ನು ಹಾಗೂ ಗುರುತಿಸಲ್ಪಡುವ ಅವಕಾಶಗಳನ್ನು ನೀಡುತ್ತದೆ. ಯೂಥ್ ಐಡಿಯಾತೋನ್ ಸ್ಪರ್ಧೆಯಲ್ಲಿ ಕೊಂಬೆಟ್ಟು ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಉಜ್ವಲ್ ಯು ನಾಯ್ಕ್, ಪ್ರವೀತ್ ಉರ್ಲಾಂಡಿ, ಆದಿತ್ಯ, ಹಿತೇಶ್ ಭಾಗವಹಿಸಿದ್ದರು.
Home ಚಿತ್ರ ವರದಿ ರಾಷ್ಟ್ರಮಟ್ಟದ ಯೂತ್ ಐಡಿಯಾತೋನ್ ಸ್ಪರ್ಧೆಯಲ್ಲಿ ಕೊಂಬೆಟ್ಟು ಅಟಲ್ನ ವಿದ್ಯಾರ್ಥಿಗಳು ಸ್ಪೆಷಲ್ ಮೆನ್ಷನ್ನಲ್ಲಿ ಪ್ರಥಮ