ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0

ಪುತ್ತೂರು: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾ.8 ರಂದು ಆಚರಿಸಲಾಯಿತು.

 ನಾಲ್ಕು ಜನ ಮಹಿಳಾ ಸಾಧಕರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪರಿಚಯಿಸಲಾಯಿತು. ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಇವರು ಮಾತನಾಡಿ, ಪೌರಾಣಿಕ ಮತ್ತು ಐತಿಹಾಸಿಕ ಮಹಿಳಾ ಸಾಧಕರನ್ನು ಉದಾಹರಿಸುತ್ತಾ ವಿದ್ಯಾರ್ಥಿನಿಯರಿಗೆ ಸಾಧಕರಾಗಲು ಪ್ರೇರೇಪಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರು ಇಲ್ಲಿನ ಸಂಗೀತ ಉಪನ್ಯಾಸಕಿಯಾದ ಡಾ. ಸುಚಿತ್ರ ಹೊಳ್ಳ ಮಾತನಾಡುತ್ತಾ ವಿದ್ಯಾರ್ಥಿಗಳು ಕಲಿಕಾ ಸಮಯದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡಾಗ ತಮ್ಮ ಮುಂದಿನ ಜೀವನದಲ್ಲಿ ಉತ್ತಮ ಸಾಧಕರಾಗಬಹುದು ಎಂದು ಹೇಳಿದರು. ಜೀ ಕನ್ನಡ ಚಾನಲ್ ನ ಸರಿಗಮಪ ಸೀಸನ್ 20 ಖ್ಯಾತಿಯ ಸಮನ್ವಿ ರೈ ಮಾತನಾಡುತ್ತಾ, ನನ್ನ ಸಾಧನೆಯ ಹಿಂದೆ ಅಪ್ಪ-ಅಮ್ಮನ ಕೊಡುಗೆ ಬಹಳ ಇದ್ದು ಅವರೇ ನನಗೆ ರೋಲ್ ಮಾಡೆಲ್ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿ ಸುಳ್ಯದ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ “ಧ್ವನಿ ಮಾಯೆ” ಖ್ಯಾತಿಯ ಸಾಯಿ ಶೃತಿರವರು ವಿದ್ಯಾರ್ಥಿನಿಯರಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡಿದರು ಮತ್ತು ತಮ್ಮ ಧ್ವನಿ ಮಾಯೆಯ ಮೂಲಕ ಚಿಂಟು ಗೊಂಬೆಯೊಂದಿಗೆ ಮಾತನಾಡುತ್ತಾ ವಿದ್ಯಾರ್ಥಿನಿಯರನ್ನು ರಂಜಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಕೆ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿ ಸಾಧಕನಾಗಬೇಕಾದರೆ ಜೀವನದಲ್ಲಿ ಶಿಸ್ತು, ಕಠಿಣ, ಪರಿಶ್ರಮ, ತಾಳ್ಮೆ ಮತ್ತು ಧೈರ್ಯ ಇದೆಲ್ಲವನ್ನು ಮೈಗೂಡಿಸಿಕೊಂಡಿರಬೇಕೆಂದು ತಿಳಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ಸಂಚಾಲಕರಾದ ಪ್ರೊ.ಸ್ಟೀವನ್ ಕ್ವಾಡ್ರಸ್, ವಿದ್ಯಾರ್ಥಿ ಕ್ಷೇಮಪಾಲಕರಾದ ಪ್ರೊ.ಐವಾನ್ ಫ್ರಾನ್ಸಿಸ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು ಈ ಸಮಾರಂಭದಲ್ಲಿ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಅನ್ವಿತಾ ಕಾರ್ಯಕ್ರಮ ನಿರ್ವಹಿಸಿದರು. ಅವನಿ ಅತಿಥಿಗಳನ್ನು ಸ್ವಾಗತಿಸಿದರು. ಚಿಂತನಾ ವಂದಿಸಿದರು. ವಂದಿತಾ ಮತ್ತು ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here