ಪುತ್ತೂರು:ಒಕ್ಕಲಿಗ ಗೌಡ ಸಮುದಾಯದ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಬೆಳೆಸುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ‘ಉದ್ಯಮಿ ಒಕ್ಕಲಿಗ ಫೆಸ್ಟ್ ಸರ್ಕಲ್’ನ ಸಭೆಯು ಮಾ.24ರಂದು ಸಂಜೆ ತೆಂಕಿಲ ಒಕ್ಕಲಿಗ ಸಮುದಾಯ ಭವನದ ಚುಂಚ ಶ್ರೀ ಸೆಮಿನಾರ್ ಹಾಲ್ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ, ಉದ್ಯಮಗಳನ್ನು ಸ್ಥಳೀಯವಾಗಿ ವಿಸ್ತಾರ ಮಾಡಿದಷ್ಟು ನಮ್ಮ ಉದ್ಯಮ ಭದ್ರವಾಗಲಿದೆ.ಉತ್ತಮ ಕೆಲಸ, ಉದ್ಯಮ ಮಾಡುವವರನ್ನು ನಮ್ಮ ಜಾತಿ, ಕುಟುಂಬ, ಸಮಾಜದಿಂದ ಗೌರವಿಸಿ, ಪ್ರೋತ್ಸಾಹಿಸಬೇಕು.ಇಂತಹ ಸಾಧಕರನ್ನು ಬೆಂಬಲಿಸುವ ಸಂಸ್ಕೃತಿ ಬರಬೇಕು. ಯುವ ಉದ್ಯಮಿಗಳನ್ನು ಗುರುತಿಸಿ ಅವರಿಗೆ ಮನೆಯಿಂದ ಬೆಂಬಲ ನೀಡುವ ಸಂಸ್ಕೃತಿ ಬರಬೇಕು.ನಾವು ಸಮಾಜದ ಕನ್ನಡಿಯಾಗಬೇಕು.ನಮ್ಮೊಳಗಿನ ಸ್ಪರ್ಧೆ ನಿಂತು ಸಮಾಜದ ಬೆಂಬಲ ನೀಡಬೇಕು.ಟೀಕೆ ಮಾಡುವುದು ಸರಿಯಲ್ಲ.ಶೇ.33ರಷ್ಟು ಗೌಡ ಸಮುದಾಯದವರಿದ್ದರೂ ಉದ್ಯಮ ಕ್ಷೇತ್ರದಲ್ಲಿ ಸೀಮಿತ ಸಂಖ್ಯೆಯಲ್ಲಿದ್ದಾರೆ.ಅವರವರ ಸಾಮರ್ಥ್ಯಕ್ಕೆ ಸರಿಯಾದ ಬೆಲೆ ಸಿಗಬೇಕು. ತನ್ನ ಸಾಮರ್ಥ್ಯಕ್ಕೆ ಸರಿಯಾಗಿ ಬೆಳೆದವ ಯಶಸ್ವಿ ಉದ್ಯಮಿಯಾಗಬಹುದು ಎಂದರು.ಒಳ್ಳೆಯ ಕೆಲಸವನ್ನು ಗುರುತಿಸಬೇಕು.ನಾವು ಸಮಾಜದ ಜೊತೆ ಬೆಳೆದಾಗ ನಮ್ಮನ್ನು ಸಮಾಜ ಬೆಳೆಸುತ್ತದೆ.ಉದ್ಯಮದಲ್ಲಿ ನಯವಂತರಾಗಿ ಬೆಳೆಯಬೇಕು.ಉದ್ಯಮದಲ್ಲಿ ಗುಣಮಟ್ಟ ಇದ್ದು ಪ್ರಚಾರ ಇಲ್ಲದಿದ್ದರೆ ಬೆಳೆಯಲು ಸಾಧ್ಯವಿಲ್ಲ.ಹೀಗಾಗಿ ಉದ್ಯಮಿಗಳನ್ನು ಪತ್ರಿಕೆ, ಚಾನೆಲ್ ಮೂಲಕ ಬೆಳೆಸಲಾಗುವುದು, ಸಾಧನೆಯನ್ನು ಗುರುತಿಸಲಾಗುವುದು ಎಂದು ಅವರು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ‘ನ್ಯೂಸ್ ಪುತ್ತೂರು’ ಇದರ ಚೆಯರ್ಮೆನ್ ಸೀತಾರಾಮ ಕೇವಳ ಮಾತನಾಡಿ, ಉದ್ಯಮಿ ಒಕ್ಕಲಿಗ ಫೆಸ್ಟ್ ಸರ್ಕಲ್ನಿಂದ ನನಗೇನು ಲಾಭ ಇದೆ ಎಂಬ ಪ್ರಶ್ನೆ ಎಲ್ಲರಲ್ಲಿದ್ದು ಸ್ಪರ್ಧಾತ್ಮಕವಾಗಿ ಮುನ್ನಡೆಯಲು ಇದೊಂದು ಅದ್ಭುತ ಪರಿಕಲ್ಪನೆ.ಸಮುದಾಯದ ಉದ್ಯಮಿಗಳಿಗೆ ಬಲ ಕೊಡುವ ಕೆಲಸವಾಗಲಿದೆ.ಸಾಮಾನ್ಯ ಉದ್ಯಮಿಗಳನ್ನು ಬೆಳೆಸಲು ಸಹಕಾರಿಯಾಗಲಿದೆ.ದೂರಗಾಮಿ ದೃಷ್ಟಿಯಲ್ಲಿ ಪ್ರಾರಂಭಗೊಂಡಿರುವ ಉದ್ಯಮಿ ಒಕ್ಕಲಿಗ ಫೆಸ್ಟ್ ಸರ್ಕಲ್ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ಜೊತೆಗೆ ನಾವು ಬೆಳೆಯುವ ಮೂಲಕ ಇನ್ನೊಬ್ಬರ ಉದ್ಯಮ ಬೆಳೆಸಲು ಸಹಕಾರಿಯಾಗಲಿದೆ ಎಂದರು.
ಉದ್ಯಮಿ ಒಕ್ಕಲಿಗ ಫೆಸ್ಟ್ ಸರ್ಕಲ್ನ ರಾಜ್ಯ ಸಂಯೋಜಕ ಸಾಮ್ರಾಟ್ ಗೌಡ ಕಾನತ್ತಿಲ ಫೆಸ್ಟ್ ಸರ್ಕಲ್ನ ಹಣಕಾಸು ವ್ಯವಹಾರ, ಸದಸ್ಯತ್ವದ ಬಗ್ಗೆ ಮಾಹಿತಿ ನೀಡಿ, ಈಗಾಗಲೇ 32 ಸರ್ಕಲ್ ಕಾರ್ಯನಿರ್ವಹಿಸುತ್ತಿದೆ.ಇನ್ನೂ 83 ಸರ್ಕಲ್ಗಳನ್ನು ಮಾಡಲಾಗುವುದು.2 ತಿಂಗಳಲ್ಲಿ 112 ಸರ್ಕಲ್ಗನ್ನು ಮಾಡುವ ಯೋಜನೆಯಿದೆ.16 ಜಿಲ್ಲೆಗಳ 150 ತಾಲೂಕುಗಳಲ್ಲಿ ವಿಸ್ತರಿಸಿ ವಿವಿಧ ವಿಭಾಗಗಳ 5750 ಉದ್ಯಮಿಗಳನ್ನು ಸದಸ್ಯರಾಗಿ ಸೇರ್ಪಡೆಗೊಳಿಸಲಾಗುವುದು.ಪ್ರತಿ ಸರ್ಕಲ್ನಲ್ಲಿ 40-50 ಮಂದಿ ವಿವಿಧ ವರ್ಗಗಳ ಉದ್ಯಮಿಗಳು ಸದಸ್ಯರಿದ್ದು ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಯಲಿದೆ.ಮೆಂಟರ್ ಮೆಂಬರ್ ಆಗಿ 5 ಮಂದಿ ಚಿಕ್ಕ ಉದ್ಯಮಿಗಳು ಹಾಗೂ ಕಾಂಟ್ರಿಬ್ಯೂಟರ್ ಮೆಂಬರ್ ಆಗಿ ಸರಕಾರಿ ಅಧಿಕಾರಿಗಳನ್ನು ಹಾಗೂ ಖರೀದಿ, ಮಾರಾಟಕ್ಕೆ ಅನುಕೂಲವಾಗುವಂತೆ ಕಂಪನಿಗಳನ್ನು ಸೇರಿಸಿಕೊಳ್ಳಲಾಗುವುದು.ಒಂದು ಸರ್ಕಲ್ನಲ್ಲಿ ೩೫ ಮಂದಿ ಸದಸ್ಯರ ನೋಂದಾವಣೆ ಬಳಿಕ ಫೆಸ್ಟ್ ಸರ್ಕಲ್ನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ನಿಽ ಹೋಂ ಪ್ರಾಡಕ್ಟ್ನ ರಾಧಾಕೃಷ್ಣ ಗೌಡ ಇಟ್ಟಿಗುಂಡಿ ಮಾತನಾಡಿ, ನಮ್ಮ ಉದ್ಯಮವನ್ನು ತಾಲೂಕಿನಿಂದ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಬೆಳೆಸಲು ಫೆಸ್ಟ್ ಸರ್ಕಲ್ ಪ್ಲಾಟ್ ಫಾರಂ ಆಗಲಿದೆ. ನಮ್ಮ ಉದ್ಯಮದ ಉತ್ಪನ್ನಗಳನ್ನು ವಿಸ್ತರಿಸಲು ಹಾಗೂ ಉದ್ಯಮವನ್ನು ಬೆಳೆಸಲು ಸಹಕಾರಿಯಾಗಲಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿಕೊಂಡು ಎಲ್ಲಾ ಉದ್ಯಮಿಗಳು ಬಳಸಿಕೊಳ್ಳಬೇಕು ಎಂದರು.
ತಾಲೂಕು ಒಕ್ಕಲಿಗ ಗೌಡ ಸಮಾಜ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ, ಸಂಘದ ಮುಖಾಂತರ ನಮ್ಮ ಸಮಾಜದ ಅಭಿವೃದ್ಧಿಗೆ ಸತತ ಪ್ರಯತ್ನ ಮಾಡಲಾಗುತ್ತಿದೆ. ಹೊಸದಾಗಿ ಸೇರ್ಪಡೆಗೊಂಡಿರುವ ಫೆಸ್ಟ್ ಸರ್ಕಲ್ ಸಮಾಜದ ಉದ್ಯಮಿಗಳು ಬೆಳೆಯಲು ಸಹಕಾರಿಯಾಗಲಿದೆ.ಈ ನಿಟ್ಟಿನಲ್ಲಿ ಸಮಾಜದ ಸರ್ವರ ಸಹಕಾರ ಅಗತ್ಯ ಎಂದು ಹೇಳಿ, ಉದ್ಯಮಿಗಳು ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ನ್ಯಾಯವಾದಿ, ಚಿದಾನಂದ ಬೈಲಾಡಿ, ಲಹರಿ ಡ್ರೈ -ಟ್ಸ್ನ ಕುಸುಮಾಧರ, ಪ್ರೇರಣಾ ಸಂಸ್ಥೆಯ ನಿರ್ದೇಶಕ ವಸಂತ ವೀರಮಂಗಲ, ಪ್ರೇರಣಾ ಡೆವಲಪ್ಪರ್ಸ್ನ ನಾಗೇಶ್ ಕೆಡೆಂಜಿ, ಸುದ್ದಿ ಬಿಡುಗಡೆ ಬೆಳ್ತಂಗಡಿಯ ಸಿಇಓ ಸಿಂಚನ ಊರುಬೈಲು, ಸುಶಾಂತ್ ಕೆಡೆಂಜಿ, ಯಶವಂತ ಕುಮಾರ್ ಬೇರಿಕೆ, ಆಕಾಶ್, ಇಂಟೀರಿಯರ್ ಡಿಸೈನರ್ ಸ್ವರ್ಣ, ಅಕ್ಷಯ ಇಂಡಸ್ಟ್ರೀಸ್ನ ಧರ್ಮಪಾಲ ಗೌಡ ಮುರ, ಹರೀಶ್ ಪಾಣಂಬ, ದಾಮೋದರ ಗೌಡ ಗೆಣಸಿನಕುಮೇರು, ಮೋಹನ್ ಗ್ರಾಫಿಕ್ಸ್ನ ಮೋಹನ್, ಆರ್ವಿ ಇಂಟರ್ ಗ್ರಾಫಿಕ್ಸ್ನ ಗಿರೀಶ್, ವೆಂಕಟ್ರಮಣ ಗೌಡ ಕಳುವಾಜೆ, ನಾರಾಯಣ ಗೌಡ, ಶ್ರೀಧರ ಗೌಡ ಕಣಜಾಲು, ಶಶಿಧರ, ಪ್ರವೀಣ್ ರಾಮಕುಂಜ, ರವಿರಾಜ್ ಚಾರ್ವಾಕ, ಸ್ಟ್ರಕ್ಚರಲ್ ಕನ್ಸಲ್ಟೆಂಟ್ ಪ್ರಸನ್ನ, ಪದ್ಮ ಕೋಲ್ಚಾರ್, ಲೋಕೇಶ್ ಪೆರ್ಲಂಪಾಡಿ, ಎವಿಜಿ ಅಸೋಸಿಯೇಟ್ಸ್ನ ಎ.ವಿ.ನಾರಾಯಣ ಗೌಡ, ಉಮೇಶ್ ಮಳುವೇಲು, ಪ್ರವೀಣ್ ಕುಂಟ್ಯಾನ, ರಾಧಾಕೃಷ್ಣ ನಂದಿಲ, ರೋಹಿತ್, ಕೃಷ್ಣಪ್ರಸಾದ್, ಮರೀಲ್ ಭಾರತ್ ಎಂಟರ್ಪ್ರೈಸಸ್ನ ತಮ್ಮಪ್ಪ ಗೌಡ ಸಭೆಯಲ್ಲಿ ಭಾಗವಹಿಸಿದ್ದರು.ಸಂಯೋಜಕ ಶಿವರಾಮ ಮತಾವು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಯೋಜಕ ಅನೂಪ್ ಕೆ.ಜೆ ವಂದಿಸಿದರು.