ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕರಾಗಿರುವ ರವಿಚಂದ್ರ ನೆಲ್ಲಿತ್ತಾಯ ಅವರ ಪತ್ನಿ ಅನನ್ಯ(36ವ)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಎ.3ರಂದು ನಿಧನರಾದರು.
ಅನನ್ಯ ನೆಲ್ಲಿತ್ತಾಯ ಅವರು ಅನಾರೋಗ್ಯ ನಿಮಿತ್ತ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ನಿಧನರಾಗಿದ್ದಾರೆ.
ಮೃತರು ಪತಿ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ಇಬ್ಬರು ಸಹೋದರಿಯರು, ಇಬ್ಬರು ನಾದಿನಿಯರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಅವರ ಮನೆಯ ಜಾಗದಲ್ಲೇ ಮಾಡಲಾಯಿತು. ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.
