ಪುತ್ತೂರು: ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.
ಸಿ ಗ್ರೇಡ್‌ಗೆ ಸೇರಿದ ದೇವಸ್ಥಾನದಲ್ಲಿ ಅರ್ಚಕ ಸ್ಥಾನದಿಂದ ಸುಬ್ರಹ್ಮಣ್ಯ ಎನ್.ಕೆ, ಪ.ಜಾತಿ, ಪ,ಪಂಗಡದಿಂದ ಲಿಂಗಪ್ಪ ನಾಯ್ಕ ಕೊಡೆಂಕಿರಿ, ಮಹಿಳಾ ಸ್ಥಾನದಿಂದ ಪೂರ್ಣಿಮಾ ಶ್ರೀಧರ ಶೆಟ್ಟಿ ಕೊಡೆಂಕಿರಿ, ಪದ್ಮಾವತಿ ಶೀನಪ್ಪ ರೈ ಕೊಡೆಂಕಿರಿ, ಸಾಮಾನ್ಯ ಸ್ಥಾನದಿಂದ ರಾಕೇಶ್ ರೈ ಬೋಳೋಡಿ, ಕೆ.ವಿಶ್ವನಾಥ ರೈ ಕುಕ್ಕುಂಜೋಡು, ಭಾಸ್ಕರ ರೈ ಗುತ್ತು, ಅರುಣ್ ಕುಮಾರ್ ಆಳ್ವ ಬೋಳೋಡಿ ಹಾಗೂ ಪ್ರಕಾಶ್ ಪುತ್ತೂರಾಯ ಆಲಡ್ಕ ನೇಮಕಗೊಂಡಿದ್ದಾರೆ.