ಮುಂಡಾಳಗುತ್ತು: ಕಾಲಾವಧಿ ನೇಮ, ಗ್ರಾಮ ದೈವ ಶಿರಾಡಿ ದೈವದ ನೇಮೋತ್ಸವ

0

ಪುತ್ತೂರು: ಕೆದಂಬಾಡಿ ಗ್ರಾಮದ ಮುಂಡಾಳಗುತ್ತುವಿನಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ನೇಮ ಹಾಗೂ ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ದೈವಗಳ ನೇಮೋತ್ಸವ ಮೇ 17 ಮತ್ತು 18 ರಂದು ಜರಗಿತು.


ಮೇ 17 ರಂದು ಬೆಳಿಗ್ಗೆ ಗಣಪತಿ‌ ಹವನ, ಹರಿಸೇವೆ ನಡೆದು ಅನ್ನಸಂತರ್ಪಣೆ‌ ಜರಗಿತು. ಸಂಜೆ ಗುಳಿಗ ದೈವದ ನೇಮ ನಡೆದು ಬಳಿಕ ಇದ್ಪಾಡಿ ಮಂಜಕೊಟ್ಯದಿಂದ ಶ್ರೀ ದೈವಗಳ ಭಂಡಾರ ಆಗಮನವಾಗಿ ನಂತರ ಗೋಂದೋಳು ಪೂಜೆ ನಡೆದು ಅನ್ನಸಂತರ್ಪಣೆ ಜರಗಿತು. ರಾತ್ರಿ ಧರ್ಮದೈವ‌ ಪಿಲಿಚಾಮುಂಡಿ ದೈವದ ನೇಮ ನೆರವೇರಿತು.ಮೇ 18 ರಂದು ಬೆಳಿಗ್ಗೆ ನಾಗಬ್ರಹ್ಮ ದೈವದ ನೇಮ,‌ ಗ್ರಾಮ ದೈವ ಶಿರಾಡಿ ದೈವದ ನೇಮ ನಡೆದು ಮಧ್ಯಾಹ್ನ ಸಹಭೋಜನ ನಡೆಯಿತು.


ಈ ಸಂದರ್ಭ ಪ್ರಮುಖರಾದ ಚನಿಲ ತಿಮ್ಮಪ್ಪ‌ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಕೆದಂಬಾಡಿ ಬೀಡು ಭಾಸ್ಕರ ಬಲ್ಲಾಳ್, ಬೆದ್ರುಮಾರ್ ವಿಠಲ ರೈ ಮುಂಬೈ, ಬೆದ್ರುಮಾರ್ ಜೈಶಂಕರ ರೈ, ಬೆದ್ರುಮಾರ್ ಬಾಲಚಂದ್ರ ರೈ, ಕರ್ನೂರುಗುತ್ತು ದಿವಾಕರ ರೈ, ಬೂಡಿಯಾರ್‌ ರಾಧಾಕೃಷ್ಣ ರೈ, ಮುಂಡಾಳಗುತ್ತು ಯಜಮಾನ ನಿವೃತ್ತ ಡಿವೈಎಸ್ಪಿ  ಮುಂಡಾಳಗುತ್ತು ಶಾಂತರಾಮ ರೈ, ಅವರ ಪುತ್ರ, ಬ್ಯಾಂಕ್‌ ಆಫ್‌ ಬರೋಡಾ ಮ್ಯಾನೇಜಿಂಗ್‌ ಡೈರೆಕ್ಟರ್‌ & ಸಿಇಒ ರವೀಂದ್ರ ರೈ,  ಮುಂಡಾಳಗುತ್ತು ತರವಾಡು ಸೇವಾ ಸಮಿತಿಯ ನೂತನ ಅಧ್ಯಕ್ಷ ಮುಂಡಾಳಗುತ್ತು ಸುರೇಂದ್ರ ರೈ, ಗೌರವ ಕಾರ್ಯದರ್ಶಿ ಕಡಮಜಲು ಸುಭಾಸ್ ರೈ, ಮುಂಡಾಳಗುತ್ತು ಉಮ್ಮಕ್ಕೆ ಟ್ರಸ್ಟ್ ನ ಅಧ್ಯಕ್ಷ ಮುಂಡಾಳಗುತ್ತು ಉಮೇಶ್ ರೈ, ಮುಂಡಾಳಗುತ್ತು ಡಾ. ಜಯರಾಮ ರೈ,  ಅರಿಯಡ್ಕ ಕರುಣಾಕರ ರೈ, ನಾಯಿಲ ಕೃಷ್ಣ ರೈ, ಅರಿಯಡ್ಕ ಲಕ್ಷ್ಮಿನಾರಾಯಣ ಶೆಟ್ಟಿ, ಗೀತಾನಂದ ಅಡಪ, ಡಾ. ಮುಂಡಾಳಗುತ್ತು ಮಂಜುನಾಥ ರೈ, ಮುಂಡಾಳಗುತ್ತು ಮೋಹನ ಆಳ್ವ, ರಾಮಕೃಷ್ಣ ಆಳ್ವ, ವಿನೋದ್ ರೈ, ರಾಮಕೃಷ್ಣ ಅಡ್ಯಂತಾಯ, ನಂಜೆ ಡೆಕ್ಕಳ ರಾಮಯ್ಯ ರೈ, ಮುಂಡಾಳಗುತ್ತು ಸುಧಾಕರ ರೈ, ಮನೋಹರ ರೈ ಮತ್ತು ಕುಟುಂಬಿಕರು ಪಾಲ್ಗೊಂಡು ದೈವಗಳ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here