ಹಿರೆಬಂಡಾಡಿ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರತಿಷ್ಟಾ ಕಲಶಾಭಿಷೇಕ-ಅಜ್ಜನ ಪ್ರತಿಮೆಯ ಶೋಭಾಯಾತ್ರೆ

0

ಹಿರೆಬಂಡಾಡಿ: ನವೀಕರಣಗೊಂಡಿರುವ ಹಿರೆಬಂಡಾಡಿ ಗ್ರಾಮದ ನೆಹರುತೋಟ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಮೇ.21ರಂದು ಬೆಳಿಗ್ಗೆ ನೂತನವಾಗಿ ಪ್ರತಿಷ್ಠಾಪನೆಗೊಳ್ಳಲಿರುವ ಅಜ್ಜನ ಪ್ರತಿಮೆಯನ್ನು ವೈಭವದ ಶೋಭಾಯಾತ್ರೆಯೊಂದಿಗೆ ಮೇ.18ರಂದು ಬೆಳಿಗ್ಗೆ ಕ್ಷೇತ್ರಕ್ಕೆ ತರಲಾಯಿತು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಿಂದ ನೆಹರುತೋಟ ಸ್ವಾಮಿ ಕೊರಗಜ್ಜ ಕ್ಷೇತ್ರದ ತನಕ ಕುಣಿತ ಭಜನೆಯೊಂದಿಗೆ ಅಜ್ಜನ ಪ್ರತಿಮೆಯ ವೈಭವದ ಶೋಭಾಯಾತ್ರೆ ನಡೆಯಿತು. ವಳಕಡಮ ಶ್ರೀ ದೇವಿ ಭಜನಾ ಮಂದಿರ, ಶಿವನಗರ ಮಂಜುಶ್ರೀ ಭಜನಾ ಮಂದಿರ, ಹಿರೇಬಂಡಾಡಿ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ, ಕೆಮ್ಮಾರ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಮುಡಿಪು ಶ್ರೀ ಉಮಾಮಹೇಶ್ವರಿ ಭಜನಾ ಮಂದಿರ, ಸಬಳೂರು-ಅಯೋಧ್ಯಾನಗರ ಶ್ರೀರಾಮ ಭಜನಾ ಮಂದಿರ, ಕೊನೆಮಜಲು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಭಜನಾ ತಂಡಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಕ್ಷೇತ್ರದ ಆಡಳಿತ ಹಾಗೂ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ವಿಜಯಭಾನು ಗೌಡ ಗುಂಡ್ಯ, ಅಧ್ಯಕ್ಷ ಆಧಿರಾಜ ಶಾಂತಿತ್ತಡ್ಡ, ಕಾರ್ಯದರ್ಶಿ ಪ್ರಶಾಂತ ಕರೆಂಕಿ, ಖಜಾಂಜಿ ನಾಗರಾಜ ಸೀಂಕ್ರುಕೊಡಂಗೆ, ಸದಸ್ಯರಾದ ಸತೀಶ ವಳಕಡಮ, ಪ್ರಸನ್ನ ನೆಹರುತೋಟ, ಪ್ರವೀಣ ನೆಹರುತೋಟ, ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್‌ದಾಸ್ ಗೌಡ ನೆಹರುತೋಟ, ಅಧ್ಯಕ್ಷ ಹೊನ್ನಪ್ಪ ಖಂಡಿಗ ಶಾಖೆಪುರ, ಉಪಾಧ್ಯಕ್ಷ ವಿನಯ ರೈ ಕೊಯಿಲಪಟ್ಟೆ, ಜೊತೆ ಕಾರ್ಯದರ್ಶಿ ಹರಿಶ್ಚಂದ್ರ ಮಾಳ, ಸದಸ್ಯರಾದ ನಾರಾಯಣ ಕನ್ಯಾನ, ಅಶೋಕ ಹಲಸಿನಕಟ್ಟೆ, ಹರಿಣಾಕ್ಷಿ ಶೆಟ್ಟಿ ಮದಿಮೆತ್ತಿಮಾರ್ ಹಾಗೂ ವಿವಿಧ ಸಮಿತಿಯ ಸದಸ್ಯರು ಮೆರವಣಿಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here