ಪುತ್ತೂರು: ವಿಶ್ವ ನೃತ್ಯ ದಿನಾಚರಣೆಯ ಅಂಗವಾಗಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವತಿಯಿಂದ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ಆನಂದ ನಟನಂ ಶೀರ್ಷಿಕೆಯಲ್ಲಿ ವಿವಿಧ ನೃತ್ಯಗಳನ್ನು ನೃತ್ಯಾಂತರಂಗ 127ನೇ ಸರಣಿಯಲ್ಲಿ ಪ್ರಸ್ತುತಪಡಿಸಲಾಯಿತು.

ನೃತ್ಯಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಕುಮಾರ್ ಅಲ್ಲದೆ ಸಂಸ್ಥೆಯ ವಿದ್ಯಾರ್ಥಿಗಳಾದ ವಸುಧ ಜಿ.ಎನ್, ಪ್ರಣಮ್ಯ ಪಾಲೆಚ್ಚಾರು, ವಿಭಾಶ್ರೀ ವಿ. ಗೌಡ, ಶಮಾ ಚಂದುಕೂಡ್ಲು ಮತ್ತು ಮಾತಂಗಿ ನೃತ್ಯ ಪ್ರದರ್ಶನಗೈದರು. ಅಭ್ಯಾಗತರಾಗಿ ಆಗಮಿಸಿದ್ದ ವಿವೇಕಾನಂದ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಭರತನಾಟ್ಯ ಮತ್ತು ಲಯವಾದ್ಯ ಕಲಾವಿದರಾದ ವಿದ್ವಾನ್ ಬಾಲಕೃಷ್ಣ ಹೊಸಮನೆಯವರು ಲಲಿತ ಕಲೆಗಳ ಮಹತ್ವದ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು.