ಇಡ್ಕಿದು ಸೇವಾ ಸಹಕಾರಿ ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ರವೀಂದ್ರನಾಥ ಮೇಲಾಂಟ ನೇಮಕ

0

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ರವೀಂದ್ರನಾಥ ಮೇಲಾಂಟರವರನ್ನು ನೇಮಕ ಮಾಡಲಾಗಿದೆ.


ಅವರು ಕಳೆದು 29 ವರ್ಷಗಳಿಂದ ಇಡ್ಕಿದು ಸೇವಾ ಸಹಕಾರಿ ಸಂಘದಲ್ಲಿ ವಿವಿಧ ಜವಾಬ್ಧಾರಿ ಗಳನ್ನು ನಿರ್ವಹಿಸಿ ಕೇಂದ್ರ ಕಛೇರಿಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ಇದೀಗ ಪ್ರಭಾರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಈಶ್ವರ ನಾಯ್ಕ್ ಎಸ್. ರವರು 1989ರಲ್ಲಿ ಸಂಘಕ್ಕೆ ಸಾಮಾನ್ಯ ನೌಕರರಾಗಿ ಸೇರ್ಪಡೆಗೊಂಡು ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, 2007ರಲ್ಲಿಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಭಡ್ತಿಹೊಂದಿದ್ದರು. ಒಟ್ಟು 36 ವರುಷಗಳ ಕಾಲ ಸೇವೆ ಸಲ್ಲಿಸಿ ಮೇ.21 ರಂದು ನಿವೃತ್ತರಾದರು. ಪ್ರಸ್ತುತ ತೆರವಾದ ಹುದ್ದೆಗೆ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ರವೀಂದ್ರನಾಥ ಮೇಲಾಂಟರವರನ್ನು ನೇಮಕ ಮಾಡಲಾಗಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here