ಪುತ್ತೂರು: ವಿದ್ಯಾರ್ಥಿಗಳಲ್ಲಿ ಹಣಕಾಸು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.30ರಂದು ಝೆರೋದಾ ವರ್ಸಿಟಿ ಕಂಪನಿಯು ’ಇಂಡಿಯಾಸ್ ಪ್ರೀಮಿಯರ್ ಫೈನಾನ್ಸ್ ಕ್ವಿಜ್’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

6 ರಿಂದ 9ನೇ ತರಗತಿ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿ, ಅದರಲ್ಲಿ ಆಯ್ಕೆಯಾದ 18 ವಿದ್ಯಾರ್ಥಿಗಳನ್ನು 6 ತಂಡಗಳಾಗಿ ವಿಂಗಡಿಸಲಾಯಿತು. ಝೆರೋದಾ ವರ್ಸಿಟಿ ಕ್ವಿಜ್ ಮಾಸ್ಟರ್ ಅರ್ಚನಾ ದಿನೇಶ್ ರವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೇಕ್ಷಕರಿಗೂ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡಿ, ಬಹುಮಾನಗಳನ್ನು ವಿತರಿಸಲಾಯಿತು.
ಝೆರೋದಾ ವರ್ಸಿಟಿ ಸಂಸ್ಥೆಯ ಸಂಘಟಕಕಿ ಪ್ಲಾವಿಯ ಡಿಕುನ್ಹಾ ಹಾಗೂ ಸಂಸ್ಥೆಯ ಮಾರಾಟ ವ್ಯವಸ್ಥಾಪಕ ಆಲ್ವಿನ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಶಾಲಾ ಪ್ರಾಂಶುಪಾಲೆ ಭಗಿನಿ ಅನಿತಾ ಸ್ವಾಗತಿಸಿದರು.