ಅಧ್ಯಕ್ಷರಾಗಿ ಶ್ರೀಧರ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಪಾಣಾಜೆ
ನಿಡ್ಪಳ್ಳಿ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇದರ ಹಿರಿಯ ವಿದ್ಯಾರ್ಥಿ ಸಂಘದ ಸಭೆಯು ಅಧ್ಯಕ್ಷ ರಾಧಾಕೃಷ್ಣ ತೂಂಬಡ್ಕ ಇವರ ಅಧ್ಯಕ್ಷತೆಯಲ್ಲಿ ಜು.6ರಂದು ಶಾಲೆಯ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಹಿರಿಯ ವಿದ್ಯಾರ್ಥಿಗಳ ಸಮ್ಮಿಳನ ಕಾರ್ಯಕ್ರಮ ಮಾಡುವುದೆಂದು ನಿರ್ಣಯಿಸಲಾಯಿತು. ಶಿಕ್ಷಕ ನಾಗೇಶ್ ಪಾಟಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಉರ್ಮಿಳಾ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿ ನೂತನ ಸಮಿತಿಗೆ ಶುಭ ಹಾರೈಸಿದರು.

ನೂತನ ಸಮಿತಿ:
ಅಧ್ಯಕ್ಷರಾಗಿ ಶ್ರೀದರ್ ನಾಯ್ಕ ತೂಂಬಡ್ಕ, ಉಪಾಧ್ಯಕ್ಷರಾಗಿ ಭರತ್ ಅಳ್ವ ಸೂರಂಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಪಾಣಾಜೆ, ಕಾರ್ಯದರ್ಶಿಯಾಗಿ ಶಂಕರ ಭರಣ್ಯ, ಜೊತೆ ಕಾರ್ಯದರ್ಶಿಯಾಗಿ ಯಶಸ್ವಿನಿ ಬಾಜುಗುಳಿ,ಕೋಶಾಧಿಕಾರಿಯಾಗಿ ವಿನೋದ್ ರಾಜ್ ತೂಂಬಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿರಣ್ ನಡುಮನೆ ಮತ್ತು ಸುಪ್ರೀಯ ಎಂ.ಎ, ಕ್ರೀಡಾ ಕಾರ್ಯದರ್ಶಿಯಾಗಿ ವಸಂತ ಭರಣ್ಯ ಮತ್ತು ಸುನಿತಾ ಬಾಜುಗುಳಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂತೋಷ್ ರೈ, ರಾಧಾಕೃಷ್ಣ ತೂಂಬಡ್ಕ, ರವಿಚಂದ್ರ ಭರಣ್ಯ, ಗುರುರಾಜ್ ಭರಣ್ಯ, ದಯಾನಂದ ತೂಂಬಡ್ಕ, ಸದಾನಂದ ಭರಣ್ಯ, ಹರೀಶ್ ಯಂ., ಕೃಷ್ಣ ನಾಯ್ಕ ತೂಂಬಡ್ಕ, ಸುರೇಶ ತೂಂಬಡ್ಕ, ವಿನಯ್ ಕುಮಾರ್ ಟಿ, ಪುಷ್ಪರಾಜ್ ಟಿ ಇವರನ್ನು ಆರಿಸಲಾಯಿತು.