ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ನೇತೃತ್ವದಲ್ಲಿ ವನಮಹೋತ್ಸವ ಅರಣ್ಯ ಹಬ್ಬ ಕಾರ್ಯಕ್ರಮಗಳು ಜು.12 ರಂದು ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಅರಣ್ಯ ಸಂಚಾರಿ ದಳ ಮಂಗಳೂರು ಇದರ ವಲಯ ಅರಣ್ಯಧಿಕಾರಿ ಸಂತೋಷ ಕುಮಾರ್ ರೈ ಕೆ ಮಾತನಾಡಿ, ಪ್ರಕೃತಿಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ ಅದರ ಅಂತರ್ ಸತ್ವ ತಿಳಿಯಬಹುದು. ಪ್ರಕೃತಿಯನ್ನು ನೈಜವಾಗಿರುವಂತೆ ಇಡಬೇಕು. ಪ್ರಯೋಗಗಳು ಕಡಿಮೆಯಾಗಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಸುರಕ್ಷಾ ಸಮಿತಿ ಅಧ್ಯಕ್ಷ ಚೇತನ್, ಹಿರಿಯ ಶಿಕ್ಷಕಿ ಗೈಡ್ ಕ್ಯಾಪ್ಟನ್ ವಿಲ್ಮಾ ಫೆರ್ನಾಂಡಿಸ್ ಹಾಗೂ ಸ್ಕೌಟ್ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಉಪಸ್ಥಿತರಿದ್ದರು.
ಶಿಕ್ಷಕಿ ನಳಿನಾಕ್ಷಿ ಸ್ವಾಗತಿಸಿ, ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹಾಡಿನ ಮೂಲಕ ಜಾಗೃತಿ ಮೂಡಿಸಿದರು. ಸುಮಾರು 500 ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ಮಕ್ಕಳು ಭಾಗವಹಿಸಿದರು. ಬಳಿಕ ಗಿಡ ನೆಡುವ ಕಾರ್ಯಕ್ರಮ ನೆರವೇರಿತು.