ಪುತ್ತೂರು: ರಿಯಲ್ ಎಸ್ಟೇಟ್ ಫ್ರೆಂಡ್ಸ್ ಪುತ್ತೂರು ಇದರ ಆಶ್ರಯದಲ್ಲಿ, ಯು.ಆರ್. ಪ್ರಾಪರ್ಟಿಸ್ ಪುತ್ತೂರು, ಸಿಝ್ಲರ್ ಫ್ರೆಂಡ್ಸ್ ಸಾಮೆತ್ತಡ್ಕ ಮತ್ತು ಕುಂಕುಮ್ ಅಸೋಸಿಯೇಟ್ಸ್ ಇವರ ಸಹಯೋಗದೊಂದಿಗೆ “ಕೆಸರ್ಡೊಂಜಿ ದಿನ” ಜು.27ರಂದು ಪುತ್ತೂರಿನ ಕಾರ್ಜಲ್ ಮೈದಾನದಲ್ಲಿ ನಡೆಯಲಿದೆ.
ಬೆಳಗ್ಗೆ 9:00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪುತ್ತೂರು ಆದರ್ಶ ಆಸ್ಪತ್ರೆಯ ವೈದ್ಯ ಡಾ. ಕೆ. ಪ್ರಸಾದ್ ಭಂಡಾರಿ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಜಲ್ ದೈವಸ್ಥಾನ ಆಡಳಿತ ಮೊಕ್ತೇಸರ ಅಜಿತ್ ಕುಮಾರ್ ಜೈನ್ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಲಿದ್ದಾರೆ.
ಯು.ಆರ್. ಪ್ರಾಪರ್ಟಿಸ್ ನ ಉಜ್ವಲ್ ಪ್ರಭು, ನಳೀಲು ದೇವಸ್ಥಾನದ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು, ಸಿಝ್ಲರ್ ಪ್ರಸನ್ನ ಕುಮಾರ್ ಶೆಟ್ಟಿ, ಪುತ್ತೂರು ನಗರಸಭೆ ಸದಸ್ಯ ದಿನೇಶ್ ಕುಮಾರ್ ಶೇವಿರೆ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 5:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟ, ಹಾಸನ ಶಾಸಕ ಸ್ವರೂಪ ಗೌಡ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಸಂಜೀವ ಮಠಂದೂರು ಸೇರಿದಂತೆ ಹಲವು ರಾಜಕೀಯ, ಧಾರ್ಮಿಕ ಕ್ಷೇತ್ರದ ಗಣ್ಯರು, ಉದ್ಯಮಿಗಳು, ಸಮಾಜಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಲಿದೆ. ಕಾರ್ಯಕ್ರಮದ ದಿನ ಅಂದರೆ ಜು.27 ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಕೆಸರುಗದ್ದೆಯಲ್ಲಿ ಹಾಜರಿರುವ ಮಕ್ಕಳಿಗೆ ವಿಶೇಷ, ಆಕರ್ಷಕ ಬಹುಮಾನವನ್ನು ನೀಡಲಾಗುವುದೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಟೋಟ ಸ್ಪರ್ಧೆಗಳ ವಿವರ
ಮಕ್ಕಳಿಗೆ
1ರಿಂದ 4ನೇ ತರಗತಿಯವರೆಗೆ :
ಮಡಿಕೆ ಹೊಡೆಯುವುದು, ಪಾಸ್ದ ಬಾಲ್ ಲಿಂಬೆ ಚಮಚ, 100 ಮೀ ಓಟ ಹಿಂಬದಿ ಓಟ
5ರಿಂದ 8ನೇ ತರಗತಿಯವರೆಗೆ :
ಮಡಿಕೆ ಹೊಡೆಯುವುದು ಪಾಸ್ದ ಬಾಲ್ ಲಿಂಬೆ ಚಮಚ, 100 ಮೀ ಓಟ ಹಿಂಬದಿ ಓಟ
9ರಿಂದ 12ನೇ ತರಗತಿಯವರೆಗೆ :
ಮಡಿಕೆ ಹೊಡೆಯುವುದು, ಕಂಬಳ (3ಜನ ),ಗೂಟ ಓಟ. ಲಿಂಬೆ ಚಮಚ,ಹಿಂಬದಿ ಓಟ
ಪುರುಷರಿಗೆ
ಹಗ್ಗಜಗ್ಗಾಟ (9 ಜನರ ತಂಡ), ಅಟ್ಟಿ ಮಡಿಕೆ (10 ಜನರ ತಂಡ), ವಾಲಿಬಾಲ್ (6 ಜನರ ತಂಡ), ಹಾಳೆ ಎಳೆಯುವುದು ಮುಂತಾದ ಸ್ಪರ್ಧೆಗಳು
ಮಹಿಳೆಯರಿಗೆ
ಹಗ್ಗಜಗ್ಗಾಟ (ಸ್ಥಳದಲ್ಲೇ ತಂಡ ರಚನೆ), ಲಿಂಬೆ ಚಮಚ, ಹಾಳೆ ಎಳೆಯುವುದು,ಹಿಂಬದಿ ಓಟ, ಮಡಿಕೆ ಹೊಡೆಯುವುದು.
ಸಾರ್ವಜನಿಕರಿಗೆ
ನಿಧಿ ಶೋಧನೆ (ಬಹುಮಾನ: ಚಿನ್ನದ ನಾಣ್ಯ)
ಬಹುಮಾನಗಳ ವಿವರ
ಹಗ್ಗಜಗ್ಗಾಟ (ಪುರುಷರು)
ಪ್ರಥಮ: ₹25,000 + ಶಾಶ್ವತ ಫಲಕ
ದ್ವಿತೀಯ: ₹15,000 + ಫಲಕ
ತೃತೀಯ: ₹5,000 + ಫಲಕ
ಚತುರ್ಥ: ₹3,000 + ಫಲಕ
ವಾಲಿಬಾಲ್
ಪ್ರಥಮ: ₹10,000 + ಫಲಕ
ದ್ವಿತೀಯ: ₹5,000 + ಫಲಕ
ಅಟ್ಟಿ ಮಡಿಕೆ
ಪ್ರಥಮ: ₹10,000 + ಫಲಕ
ಮಹಿಳೆಯರ ಹಗ್ಗಜಗ್ಗಾಟ
ಪ್ರಥಮ: ₹10,000 + ಫಲಕ
ದ್ವಿತೀಯ: ₹5,000 + ಫಲಕ
ವಿಶೇಷ ಸೂಚನೆಗಳು:
ಹಗ್ಗಜಗ್ಗಾಟ ಸ್ಪರ್ಧೆ ಆಹ್ವಾನಿತ ತಂಡಗಳಿಗೆ ಮಾತ್ರ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮಧ್ಯಾಹ್ನ ಭೋಜನ ವ್ಯವಸ್ಥೆ ಇದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕಾರ್ತಿಕ್ ನಗರ 99016 49754, ಸಂದೇಶ ನಗರ 9964246021, ನರೇಂದ್ರ 9986201830, ಸ್ವಾತಿ ಕುಮಾರ್ 8494952989, ಚೆನ್ನಪ್ಪ ಗೌಡ 7975323582
