ಪೋಕ್ಸೋ ಪ್ರಕರಣದ ಆರೋಪಿ ವಶಕ್ಕೆ!

0

ಪುತ್ತೂರು: ಪೋಕ್ಸೋ ಪ್ರಕರಣದ ಆರೋಪಿಯೋರ್ವನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಗಜೇಂದ್ರಗಡ ತಾಲೂಕು ದಿಂಡೂರು ಎಂಬಲ್ಲಿಂದ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು, ದಿಂಡೂರಿನ ಪೀರಪ್ಪ (35) ಬಂಧಿತ.

ಪೀರಪ್ಪ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ , 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಮಂಗಳೂರು ಪಿಠಾಸೀನ ಪುತ್ತೂರು Spl No 153/2018 ಠಾಣಾ ಅ.ಕ್ರ 16/2018 ಕಲಂ: 376(2)(i),504 ಐಪಿಸಿ, 5,6 ಪೋಕ್ಸೋ ಕಾಯ್ದೆ 2012 ನೇಪ್ರಕರಣದಲ್ಲಿ ವಾರಂಟ್ ಹೊರಡಿಸಿದ್ದು, ಜು.25ರಂದು ಪೊಲೀಸ್ ಠಾಣಾ ನಿರೀಕ್ಷಕರು ರವಿ ಬಿ. ಎಸ್ ಮತ್ತು ಉಪ ನೀರಿಕ್ಷಕರವರಾದ ಜಂಬೂ ರಾಜ್. ಬಿ.ಮಹಾಜನ್ (ಕಾ&ಸು) ಮತ್ತು ಸುಷ್ಮಾ ಜಿ ಭಂಡಾರಿ(ತನಿಖೆ ) ರವರ ನಿರ್ದೇಶನದಲ್ಲಿ ಠಾಣಾ ಹೆಚ್ ಸಿ ಪ್ರವೀಣ್ ರೈ, ಹೆಚ್ ಸಿ ಹರೀಶ್, ಪಿಸಿ ಚೋಳಪ್ಪ ಸಂಶಿ ರವರು ಗಜೇಂದ್ರಗಡ ತಾಲೂಕು ದಿಂಡೂರು ಎಂಬಲ್ಲಿಂದ ದಸ್ತಗಿರಿ ಮಾಡಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಮಂಗಳೂರು ಪಿಠಾಸೀನ ಪುತ್ತೂರು ರವರ ಮುಂದೆ ಹಾಜಾರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

LEAVE A REPLY

Please enter your comment!
Please enter your name here