‘ನೃತ್ಯ ತರಂಗಿಣಿ-3’ ಸರಣಿಯ ಪ್ರಸಾಧನ ಕಾರ್ಯಾಗಾರ

0

ಕಲಾತ್ಮಕ ಮುಖವರ್ಣಿಕೆ ಸವಾಲು: ವಿಘ್ನೇಶ್‌ ವಿಶ್ವಕರ್ಮ

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ) ವತಿಯಿಂದ ‘ನೃತ್ಯ ತರಂಗಿಣಿ-3’ ಸರಣಿಯಡಿ ಪ್ರಸಾಧನ ಕಾರ್ಯಾಗಾರ ಭಾನುವಾರ ಇಲ್ಲಿನ ಬರೆಕರೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.
ಪುತ್ತೂರಿನ ಭಾವನಾ ಕಲಾ ಆರ್ಟ್ಸ್‌ ಮುಖ್ಯಸ್ಥ ವಿಘ್ನೇಶ್‌ ವಿಶ್ವಕರ್ಮ ಅವರು ಕಾರ್ಯಾಗಾರ ಉದ್ಘಾಟಿಸಿ, ಮುಖವರ್ಣಿಕೆ ಎಂಬುದು ಸುಲಭವಲ್ಲ, ಅದು ಕೂಡ ಒಂದು ಕಲೆ. ವೈವಿಧ್ಯಮಯ ಮುಖಗಳಿಗೆ ಕಲಾತ್ಮಕ ಮುಖವರ್ಣಿಕೆ ನಡೆಸುವುದು ಒಂದು ಸವಾಲು. ಅದನ್ನು ಅಭ್ಯಾಸ ಮಾಡಿ ರೂಢಿಸಿಕೊಳ್ಳಬೇಕು. ಇದಕ್ಕೆ ಏಕತಾನತೆ, ಉತ್ಸಾಹ ಬಹಳ ಮುಖ್ಯ. ತಾಳ್ಮೆ ಮತ್ತು ಕಲೆಗಾರಿಕೆಯ ಮನಸ್ಸನ್ನು ಬೆಳೆಸಿಕೊಳ್ಳಬೇಕು ಎಂದರು.


ಈ ಸಂದರ್ಭ ಅಕಾಡೆಮಿ ವತಿಯಿಂದ ಸಂಪನ್ಮೂಲ ವ್ಯಕ್ತಿ ವಿಘ್ನೇಶ್‌ ವಿಶ್ವಕರ್ಮ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿ ಕಾರ್ಯದರ್ಶಿ ಆತ್ಮಭೂಷಣ್‌ ಪ್ರಾಸ್ತಾವಿಕದಲ್ಲಿ, ಅಕಾಡೆಮಿಯ ವಿಂಶತಿ
ಕಾರ್ಯಕ್ರಮದ ಅಂಗವಾಗಿ ವರ್ಷಪೂರ್ತಿ ಸರಣಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರ ಮೂರನೇ ಸರಣಿ ಕಾರ್ಯಕ್ರಮ ಇದಾಗಿದ್ದು, ಮುಂದೆಯೂ ಇಂತಹ ಕಾರ್ಯಕ್ರಮಗಳು ಅಕಾಡೆಮಿಯಿಂದ
ನಡೆಯಲಿದೆ ಎಂದರು.


ಮಧ್ಯಾಹ್ನ ವರೆಗೆ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಪೈಕಿ ಅಶ್ವಿನಿ, ಅಭಿಜ್ಞಾ, ತೇಜಸ್ವಿರಾಜ್‌, ತನುವಿ, ವೈಷ್ಣವಿ ಶರ್ಮಾ ಅನಿಸಿಕೆ ವ್ಯಕ್ತಪಡಿಸಿದರು. ಮೇಕಪ್‌ ಕಾರ್ಯಾಗಾರದಲ್ಲಿ ಸಹಕರಿಸಿದ ಸೌಮ್ಯಾ ಅರಸಿನಮಕ್ಕಿ ಹಾಗೂ ವಿನಿಲ್‌ ಇವರಿಗೆ ಸ್ಮರಣಿಕೆ ನೀಡಲಾಯಿತು.


ಅಕಾಡೆಮಿ ಅಧ್ಯಕ್ಷ ಮಂಜುನಾಥ್‌ ಪಿ.ಎಸ್‌, ಉಪಾಧ್ಯಕ್ಷ ಡಾ.ಕೃಷ್ಣಕುಮಾರ್‌, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಂಗಳದುರ್ಗ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here