ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಚಂದ್ರಶೇಖರ ಆಜಾದ್ ಜನ್ಮದಿನಾಚರಣೆ

0

ಪುತ್ತೂರು: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಇಲ್ಲಿ ಚಂದ್ರಶೇಖರ ಆಜಾದ್ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಶಿಕ್ಷಕರು ಆಜಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕಿ ಪವಿತ್ರ ಮಾತಾಜಿಯವರು ಕಿರು ವಯಸ್ಸಿನ ಧೀರ ವ್ಯಕ್ತಿ ಚಂದ್ರಶೇಖರ ಆಜಾದ್, ಅಪಾರ ನೋವು ನಲಿವುಗಳನ್ನು ಲೆಕ್ಕಿಸದೆ ಸ್ವಾತಂತ್ರ ಹೋರಾಟಕ್ಕೆ ಶ್ರಮಿಸಿದ ಸಾಹಸದ ಚರಿತೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. 8ನೇ ತರಗತಿ ವಿದ್ಯಾರ್ಥಿ ಅಭಿನವರಾಜ್ ಆಜಾದರ ಜೀವನದ ಆದರ್ಶ ತತ್ವ ಸಿದ್ಧಾಂತಗಳ ಬಗ್ಗೆ ಮಾತುಗಳನ್ನಾಡಿದರು.

LEAVE A REPLY

Please enter your comment!
Please enter your name here