ಕಡಬ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಡಬ ವಲಯ ಬಿಳಿನೆಲೆ ಘಟ ಸಮಿತಿ, ಶ್ರೀ ಗೋ ಕೃಷ್ಣ ವ್ಯವಸ್ಥಾಪನ ಸಮಿತಿ, ಆಟೋ ಚಾಲಕ ಮಾಲಕರ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಒಡಿಯೂರು ಪರಮ ಪೂಜ್ಯ ಸ್ವಾಮಿಜೀಯವರ 63 ಜನ್ಮೋತ್ಸವದ ಅಂಗವಾಗಿ ಶ್ರೀ ಗೋಪಾಲಕೃಷ್ಣ ದೇವಳದಲ್ಲಿ ಸ್ವಚ್ಚತಾ ಕಾರ್ಯಕ್ರಮವು ಆ.3ರಂದು ನಡೆಯಿತು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಕಳಿಗೆ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದ ಕಳೆದ 8 ತಿಂಗಳ ಅವಧಿಯಲ್ಲಿ ಶ್ರೀದೇವಳದ ವ್ಯವಸ್ಥಾಪನ ಸಮಿತಿಯೂ ದೇವಳದ ಒಳಾಂಗಣದ ಸುತ್ತೋಳಿ ಕಬ್ಬಿಣ ಮಾಡುವಿನ ಕೆಲಸ ಶುಭಕಾರ್ಯಗಳಿಗೆ ಸಭಾಭವನ ದುರಸ್ತಿ ದೇವಳದ ಮುಂಭಾಗದಲ್ಲಿ ಸ್ಥಳದಲ್ಲಿ ಸಮತಟ್ಟು ಮಾಡಿ ಅಡಿಕೆ ಗುಡಿಗಳನ್ನು ನಿಮಿ೯ಸವುದು ಈ ಕೆಲಸ ಕಾರ್ಯ ಪ್ರಗತಿಯಲ್ಲಿ ಕಾಣುತ್ತಿದ್ದು ಇದರೊಂದಿಗೆ ಇತರ ಅಭಿವೃದ್ದಿ ಕೆಲಸಗಳನ್ನು ಹಮ್ಮಿಕೊಳಲಾಗಿದೆ. ಈಗಾಗಲೇ 10 ಲಕ್ಷ ರೂಪಾಯಿ ಊರ ಮತ್ತು ಪರ ಊರಿನ ಭಕ್ತರಿಂದ ಅಭಿವೃದ್ಧಿ ಕೆಲಸ ನಡೆಸುತಾ ಬಂದಿದ್ದೆವೆ ಪ್ರಸ್ತುತ ಸಾಲಿನಲ್ಲಿ ಹೆಚ್ಚಿನ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ಶ್ರೀ ಗೋ ಕೃ ದೇವಳದ ಪ್ರಧಾನ ಅರ್ಚಕರಾದ ವೆಂಕಟೇಶ್ ಭಟ್, ಕಡಬ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವಲಯದ ಸಂಯೋಜಕರಾದ ಸುಜಾತ ಆರ್. ಶೆಟ್ಟಿ
ಬಿಳಿನೆಲೆ ಘಟ ಸಮಿತಿ ಅಧ್ಯಕ್ಷರಾದ ಶ್ರೀ ಕೇಶವ ಗೌಡ ಬಿಳಿನೆಲೆ,ನೆಟ್ಟಣ ಆಟೋ ಚಾಲಕ-ಮಾಲಕ ಸಂಘದ ಅಧ್ಯಕ್ಷರಾದ ಉಮೇಶ್ ಗೌಡ ವಾಲ್ತಾಜೆ, ಬಿಳಿನೆಲೆ ಸೇವಾ ದೀಕ್ಷಿತರಾದ ಮೋಹಿನಿ ವಾಲ್ತಾಜೆ,ಶ್ರೀ ಗೋಪಾಲಕೃಷ್ಣ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು,ಆಟೋ ಚಾಲಕ- ಮಾಲಕ ಸಂಘದ ಸದಸ್ಯರು,ಒಡಿಯೂರು ಬಿಳಿನೆಲೆ ಘಟ ಸಮಿತಿಯ ಸ್ಪ ಸಹಾಯ ಸಂಘದ ಸದಸ್ಯರುಗಳು,ಶ್ರೀ ದೇವಳದಲ್ಲಿ ಹಾಗೂ ಬಿಳಿನೆಲೆ ಪೇಟೆಯಲ್ಲಿ ಸ್ಟಚತೆ ಹಾಗೂ ಶ್ರಮದಾನ ಕಾರ್ಯಕ್ರಮ ನೇರವೇರಿಸಲಾಯಿತು.