ಲೇಲೇ ಲೇಲೇ ಗಾ…ತುಳು ದಾಸರಪದ ಬಿಡುಗಡೆ

0

ಕುಣಿತ ಭಜನೆ ಹಾಗೂ ಭಜಕರಿಗಾಗಿಯೇ ಬಿಡುಗಡೆಗೊಂಡ ಶ್ರೀ ಕೃಷ್ಣ ದೇವರ ಭಕ್ತಿಗೀತೆ

ಪುತ್ತೂರು: ಜಗದೀಶ್ ಆಚಾರ್ಯ ಪುತ್ತೂರು ಹಾಡಿರುವ ಲೇಲೇ ಲೇಲೇ ಗಾ…ತುಳು ದಾಸರಪದ ಕುಣಿತ ಭಜನೆ ಹಾಗೂ ಭಜಕರಿಗಾಗಿಯೇ ಶ್ರೀ ಕೃಷ್ಣ ದೇವರ ಭಕ್ತಿಗೀತೆ ಆ.2ರಂದು ಬಿಡುಗಡೆಗೊಂಡಿತು.

ಶ್ರೀ ನವದುರ್ಗಾ ಮಂತ್ರಾಮೂರ್ತಿ ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿಗಳಾದ ಕೆ. ಯೋಗೀಶ್ ಭಟ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬಹರೇನ್‌ನಲ್ಲಿ ಉದ್ಯಮಿಯಾಗಿರುವ ನವೀನ್ ಹಾಗೂ ಹನುಮಾನ್ ಭಟ್, ರಾಜೇಂದ್ರ ಮಂಗಳೂರು, ಪ್ರಗತ್ ಪುತ್ತೂರು ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ರೇಷ್ಮಾ ಆರ್ ಕೆ. ಹಾಗು ನವ್ಯ ಆರ್. ಕೆ. ನಿರ್ಮಾಣದಲ್ಲಿ ಈ ಹಾಡನ್ನು ತುಳುನಾಡ ಗಾನ ಗಾಂಧರ್ವ ಜಗದೀಶ್ ಆಚಾರ್ಯ ಪುತ್ತೂರು ಅವರ ಸಂಗೀತ ನಿರ್ದೇಶನ ಹಾಗೂ ರಾಗಸಂಯೋಜನೆಯಲ್ಲಿದೆ. ಗೀತೆಯ ಸಾಹಿತ್ಯ ವಾದಿರಾಜ ತೀರ್ಥರದ್ದು, ಈ ದಾಸರಪದ ಜಗದೀಶ್ ಪುತ್ತೂರು ಯೂಟ್ಯೂಬ್‌ನಲ್ಲಿ ಹಾಗೂ ಎಲ್ಲ ಪ್ರಮುಖ ಮ್ಯೂಸಿಕ್ ಸ್ಟ್ರೀಮಿಂಗ್ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಈಗಾಗಲೇ ಲಭ್ಯವಿದೆ.

LEAVE A REPLY

Please enter your comment!
Please enter your name here