ಪುತ್ತೂರು: ದರ್ಬೆತ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೯ನೇ ಸ್ವಾತಂತ್ರ್ಯೋತ್ಸವವನ್ನು ಧ್ವಜಾರೋಹಣ, ಮೆರವಣಿಗೆ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಧ್ವಜಾರೋಹಣ ನೆರವೇರಿಸಿದರು.
ಅತಿಥಿಗಳು,ಶಿಕ್ಷಕರು, ವಿದ್ಯಾರ್ಥಿಗಳು,ಪೋಷಕರು ಹಾಗೂ ಊರವರು ಸೇರಿಕೊಂಡು ಶಾಲಾ ವಠಾರದಿಂದ ಅಜಲಡ್ಕ ಅಂಗನವಾಡಿ ಕೇಂದ್ರದ ವರೆಗೆ ಮೆರವಣಿಗೆ ನಡೆಸಿಕೊಟ್ಟರು. ಅಜಲಡ್ಕ ಅಂಗನವಾಡಿ ಕೇಂದ್ರ ಹಾಗೂ ವಿಘ್ನೇಶ್ವರ ಯುವಕ ಮಂಡಲ ಅಜಲಡ್ಕ ಇದರ ಸದಸ್ಯರು ಸಹಕಾರ ನೀಡಿದರು. ಎಸ್ ಡಿ ಎಂ ಸಿಯ ಅಧ್ಯಕ್ಷ ಶುಭಕರ ನಾಯಕ್, ಶಿಕ್ಷಣ ತಜ್ಞ ಬಾಲಕೃಷ್ಣ ರೈ ಸೇರ್ತಾಜೆ, ಶೇಷಪ್ಪ ಮೂಲ್ಯ ಕುಕ್ಕುತಡಿ ನಿವೃತ್ತ ಸೈನಿಕರು, ಶ್ರೀಧರ ಮಣಿಯಾಣಿ ನಿವೃತ್ತ ಎ ಎಸ್ ಐ, ವಾಸು ಮಣಿಯಾಣಿ ನಿವೃತ್ತ ಮುಖ್ಯ ಗುರುಗಳು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ತಾರಾನಾಥ ರೈ, ನಿಕಟಪೂರ್ವ ಅಧ್ಯಕ್ಷ ರಮೇಶ್ ಸುವರ್ಣ, ನಿಕಟಪೂರ್ವ ಉಪಾಧ್ಯಕ್ಷ ವಿಠಲ ಪೂಜಾರಿ, ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಾರದಾ, ರೇಖಾ ಬಿಜತ್ರೆ, ಪ್ರದೀಪ್ ಎಸ್, ನಿಕಟಪೂರ್ವ ಸದಸ್ಯ ಮಾಧವ ಅಜಲಡ್ಕ, ಶ್ರೀ ನಾಗಬ್ರಹ್ಮೆರ್ ಕೋಟಿ ಚೆನ್ನಯ ಸನ್ನಿಧಾನ ಕುಕ್ಕುತ್ತಡಿ ಇದರ ಮೊಕ್ತೇಸರ ಜಯರಾಮ ಪೂಜಾರಿ, ಎಸ್ ಡಿ ಎಂ ಸಿ ಯ ನಿಕಟಪೂರ್ವ ಅಧ್ಯಕ್ಷ ವಸಂತ ಮಣಿಯಾಣಿ ಕೊಪ್ಪಳ ಹಾಗೂ ಶ್ರೀಧರ ಪೂಜಾರಿ, ದ್ವಾರಕಾ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ಮಣಿಯಾಣಿ, ಎಸ್ ಡಿ ಎಂ ಸಿ ಸದಸ್ಯರು, ದರ್ಬೆತ್ತಡ್ಕ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಇಂದಿರಾ, ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಅಧ್ಯಾಪಕರು ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶಿಕ್ಷಕ ದಯಾನಂದ ಸ್ವಾಗತಿಸಿ ಶಿಕ್ಷಕಿ ರಮ್ಯಾ ವಂದಿಸಿದರು.