ಪುತ್ತೂರು: ಮಾಡಾವು ಅಯ್ಯಪ್ಪ ಭಜನಾ ಮಂದಿರ ವಠಾರದಲ್ಲಿ ೭೯ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ತಾರಾನಾಥ ಕಂಪ, ಮಾಡಾವಿನ ವೈದ್ಯರಾದ ಡಾ,ರಾಮಚಂದ್ರ ಭಟ್, ಮೋಹನ ರೈ ಬೇರಿಕೆ,ಅಬ್ದುಲ್ ಹಮೀದ್ ಫ್ಯಾಮಿಲಿ, ಭಾಸ್ಕರ ರೈ ಮಠ,ಸುಬ್ರಾಯ ಗೌಡ, ದೇವಿ ಸಂದೀಪ್ ರೈಮಾಡಾವು ಮತ್ತಿತರರು ಉಪಸ್ಥಿತರಿದ್ದರು.