ಪುತ್ತೂರು: ಮೂಲತಃ ವಿಟ್ಲ ಮೂಡ್ನೂರು ಗ್ರಾಮದವರಾಗಿದ್ದು, ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿ ವಾಸವಾಗಿರುವ ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ ಮಂಗಳೂರಿನ ಈಶ್ವರ ನಾಯ್ಕ(83 ವ) ಪಿಲಿಂಜ ಅಸೌಖ್ಯದಿಂದ ಆ.21ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಎಂ ಎ.ಎಲ್.ಎಲ್.ಬಿ ಪದವಿ ಪಡೆದಿದ್ದ ಇವರು ನಿವೃತ್ತಿಯ ಬಳಿಕ ಬಿಸಿರೋಡಿನಲ್ಲಿ ಸ್ವಲ್ಪ ಸಮಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ನಿವೃತ್ತ ಶಿಕ್ಷಣ ಸಂಜೋಜಕಿ ಅಕ್ಕಣಿ, ಪುತ್ರ ಕರ್ನಾಟಕ ಬ್ಯಾಂಕ್ ಉದ್ಯೋಗಿ ವಸಂತ ಕುಮಾರ್, ಪುತ್ರಿ ಯೂನಿಯನ್ ಬ್ಯಾಂಕ್ ಉದ್ಯೋಗಿ ಗೀತಾ ರಮೇಶ್ ನಾಯ್ಕ್, ಅಳಿಯ ಕೆನರಾ ಬ್ಯಾಂಕ್ ಅಧಿಕಾರಿ ರಮೇಶ್ ದಂಬೆ, ಸಹೋದರರಾದ ಹೊನ್ನಪ್ಪ ನಾಯ್ಕ ಪಿಲಿಂಜ, ದೇವಣ್ಣ ನಾಯ್ಕ್ ಪಿಲಿಂಜ, ಓರ್ವ ಸಹೋದರಿಯರಾದ ದೇವಕಿ, ತಿರುಮಲೇಶ್ವರಿ ಸೇರಿದಂತೆ ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.