ಪುತ್ತೂರು: ಶತಮಾನೋತ್ಸವ ಸಂಭ್ರಮಾಚರಣೆಯ ಹೊಸ್ತಿಲಲ್ಲಿರುವ ಬನ್ನೂರು ಸ.ಹಿ.ಪ್ರಾ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಬನ್ನೂರು ಸ್ಪೂರ್ತಿ ಯುವ ಸಂಸ್ಥೆಗಳ ಸಂಚಾಲಕ ದಿನೇಶ್ ಸಾಲಿಯಾನ್, ಕಾರ್ಯದರ್ಶಿಯಾಗಿ ಹೈದರ್ ಆಯ್ಕೆಯಾಗಿದ್ದಾರೆ.
ಸಂಘದ ಪದಾಧಿಕಾರಿಗಳನ್ನು ಶಾಲೆಯಲ್ಲಿ ನಡೆದ ಸಭೆಯಲ್ಲಿ ಪುನರ್ ರಚನೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ಜಯಕುಮಾರ್ ಜೈನ್, ಖಜಾಂಚಿಯಾಗಿ ಸತೀಶ್ ಪೂಜಾರಿ, ಉಪಾಧ್ಯಕ್ಷರಾಗಿ ನವೀನ್ ರೈ ಬನ್ನೂರು, ಸುಂದರಿ, ಜತೆ ಕಾರ್ಯದರ್ಶಿಯಾಗಿ ಪ್ರೀತಂ ರೈ, ಸಂಚಾಲಕರಾಗಿ ರಾಮ್ಪ್ರಸಾದ್ ಮಯ್ಯ ಹಾಗೂ 15 ಮಂದಿ ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.