ರೈತ ಈ ದೇಶದ ಬೆನ್ನೆಲುಬು, ಮುಂದಿನ ದಿನಗಳಲ್ಲಿ ರೈತ ದೆವೋಭವ ಎಂಬ ಗೌರವ ರೈತನಿಗೆ ಪ್ರಾಪ್ತಿಯಾಗಲಿದೆ- ಕಡಮಜಲು ಸುಭಾಶ್ ರೈ
ಪುತ್ತೂರು: ಸಂನ್ಯಾಸಿಗುಡ್ಡೆ ಅಂಗನವಾಡಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಅಂಗನವಾಡಿಗೆ ಟ್ಯಾಂಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಕೃಷಿ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಶ್ ರೈ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 79 ವರುಷವಾದರು ದುಡಿಯುವ ಕೈಗಳು ಕಡಿಮೆ ಆಗಿ ಎಲ್ಲರೂ ವಿಲಾಸಿ ಜೀವನದತ್ತ ವಾಲುತ್ತಿರುವ ಈ ಸಂದರ್ಭದಲ್ಲಿ ನಮ್ಮನ್ನು ಹೊತ್ತು ಹೆತ್ತು ಈ ಭೂಮಿಗೆ ತಂದ ಮಾತಾ ಪಿತರಿಗೆ ಗೌರವ ನೀಡದೆ ಅವರು ಕೊಟ್ಟ ಭೂಮಿಯನ್ನು ಹಾಳುಮಾಡಿ ವಿಷಮಿಶ್ರಿತ ಆಹಾರ ಸೇವನೆ ಮಾಡಿ ಆರೋಗ್ಯದಲ್ಲಿ ವಿಷತುಂಬಿ ಏನೂ ಮಾಡಲು ಆಗದೆ ಜೀವಂತ ಶವವಾಗಿ ಬದುಕುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ಜೀವನದಲ್ಲಿ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಿದಾಗ ದೇವರು ಸಂತೃಪ್ತಿಗೊಂಡು ಮುಂದಿನ ಪೀಳಿಗೆಯ ಮಕ್ಕಳಿಗೆ ದೇವತಾಗ್ರಹ ಪ್ರಾಪ್ತಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ರೈ ಕೊರಂಗ, ಗ್ರಾ.ಪಂ ಸದಸ್ಯ ಹಾಗೂ ಎಸ್ ಡಿ ಎಂ ಸಿ ಕೆದಂಬಾಡಿ ಶಾಲೆಯ ಅಧ್ಯಕ್ಷ ಕೃಷ್ಣಕುಮಾರ್ ಇಡ್ಲಜೆ, ರೋಟಾರ್ಯಾಕ್ಟ್ ತಿಂಗಳಾಡಿ ಇದರ ಅಧ್ಯಕ್ಷ ನಿತೇಶ್ ರೈ ಕೋರಂಗ, ಯುವತರಂಗ ಕೆದಂಬಾಡಿ ಅಧ್ಯಕ್ಷ ರಕ್ಷತ್ ಗೌಡ, ಟ್ಯಾಂಕ್ ದಾನಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ವಾಣಿಶ್ರೀ ಕೃಷ್ಣಕುಮಾರ್ ಇಡ್ಲಪೆ, ಕೆದಂಬಾಡಿ ಕೆಯ್ಯೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಸಂತೋಷ್ ಕುಮಾರ್ ರೈ ಕೊರಂಗ, ಗಟ್ಟಮನೆ ಜುಮಾ ಮಸೀದಿಯ ಕಾರ್ಯದರ್ಶಿ ಬಶೀರ್ , ತಾಲೂಕು ನಲಿಕೆಯವರ ಸಂಘದ ಅಧ್ಯಕ್ಷ ಚಂದ್ರ ಇದ್ದಾಡಿ, ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್, ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಜಾತ ಭಟ್, ಸಂಘದ ಕಾರ್ಯದರ್ಶಿ ಅಮಿತ ವಿ ರೈ ಕೊರಂಗ, ಆಶಾ ಕಾರ್ಯಕರ್ತೆಯರಾದ ಪ್ರೇಮಲತಾ ಜೆ,ರೈ ಕೊರಂಗ, ಸುಂದರಿ ಕೊರಂಗ, ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪಾವತಿ, ಜಾನಕಿ ,ಕಮಲಾಕ್ಷಿ ಹಾಗೂ ಸಹಾಯಕಿ ವೇದಾ, ಸ್ತ್ರೀ ಶಕ್ತಿ ಮಹಿಳಾ ಸಂಘದ ಸದಸ್ಯರು, ವಿದ್ಯಾಭಿಮಾನಿಗಳು, ಬಂಧುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿಗೆ ಕೊಡುಗೆ ನೀಡಿದ ರೋಟರಾಕ್ಟ್ ತಿಂಗಳಾಡಿ ಇದರ ಅಧ್ಯಕ್ಷ ನೀತೇಶ್ ರೈ ಕೊರಂಗ,ವಾಣಿಶ್ರೀ ಕೃಷ್ಣಕುಮಾರ್ ಅವರಿಗೆ ಗೌರವಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ವೇದಾ, ಆಶಾಕಾರ್ಕರ್ತೆ ಪ್ರೇಮಲತಾ ಜೆ.ರೈ ಕೊರಂಗ ಸಹಕರಿಸಿದರು.