ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಿಶೇಷ ಸಾಧನೆಗೈದಿರುವುದರಿಂದ ದ.ಕ.ಜಿ.ಕೇ.ಸಹಕಾರಿ ಬ್ಯಾಂಕಿನಿಂದ 14ನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ.
2024-25ನೇ ಸಾಲಿನ ಸಹಕಾರ ಸಂಘದ ಸಾಧನೆಯನ್ನು ಪರಿಗಣಿಸಿ ಅಡಿಟ್ ವರ್ಗೀಕರಣದಲ್ಲಿ “ಎ” ತರಗತಿ ಸ್ಥಾನ ಹೊಂದಿ ಅತ್ಯುತ್ತಮವಾದ ಕಾರ್ಯನಿರ್ವಹಣೆಗಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದ.ಕ.ಜಿ.ಕೇಂದ್ರ ಸಹಕಾರ ಬ್ಯಾಂಕಿನಿಂದ ಕೊಡಲ್ಪಡುವ ಪ್ರಶಸ್ತಿಗೆ ಭಾಜನವಾಗಿರುತ್ತದೆ.
ರೂ.1.67 ಕೋಟಿ ನಿವ್ವಳ ಲಾಭ
2024-25ನೇ ಸಾಲಿನಲ್ಲಿ ಸಹಕಾರಿ ಸಂಘವು 3525 ‘ಎ’ ತರಗತಿ ಸದಸ್ಯರನ್ನು ಹೊಂದಿದ್ದು ರೂ. 5 ಕೋಟಿ 72 ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ. ಸಹಕಾರಿ ಸಂಘವು ರೂ.40 ಕೋಟಿ 34 ಲಕ್ಷ ಠೇವಣಿ ಹೊಂದಿದ್ದು, ಸದಸ್ಯರ ಹೊರ ಬಾಕಿ ಸಾಲ ರೂ.58 ಕೋಟಿ 07 ಲಕ್ಷ ಇರುತ್ತದೆ. 2024-25ನೇ ಸಾಲಿನಲ್ಲಿ ರೂ. 412 ಕೋಟಿ 92 ಲಕ್ಷ ವ್ಯವಹಾರ ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ ರೂ.1 ಕೋಟಿ 67 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.
ಕಾರ್ಯಕ್ಷೇತ್ರ
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯ ಕ್ಷೇತ್ರಕ್ಕೆ 5 ಗ್ರಾಮಗಳಾದ ಸವಣೂರು, ಪುಣ್ಚಪ್ಪಾಡಿ, ಕುದ್ಮಾರು, ಕಾಯಿಮಣ ಹಾಗೂ ಬೆಳಂದೂರು
ಗ್ರಾಮಗಳನ್ನೊಳಗೊಂಡಿರುತ್ತದೆ. ಸವಣೂರು ಗ್ರಾಮದ ಸವಣೂರು ಎಂಬಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಬೆಳಂದೂರು ಗ್ರಾಮದ ಬೆಳಂದೂರು ಎಂಬಲ್ಲಿ ಶಾಖಾ ಕಛೇರಿಯನ್ನು ಹೊಂದಿರುತ್ತದೆ.
12 ಮಂದಿ ಚುನಾಯಿತ ಸದಸ್ಯರು
ಸವಣೂರು ಸಹಕಾರಿ ಸಂಘದ ಆಡಳಿತ ಮಂಡಳಿಯಲ್ಲಿ 12 ಜನ ಚುನಾಯಿತ ಸದಸ್ಯರಿದ್ದು ಅಧ್ಯಕ್ಷರಾಗಿ ತಾರಾನಾಥ ಕಾಯರ್ಗ, ಉಪಾಧ್ಯಕ್ಷರಾಗಿ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕರುಗಳಾಗಿ ಗಣೇಶ್ ನಿಡ್ವಣ್ಣಾಯ ಎನ್ ಕುಮಾರ ಮಂಗಲ, ಉದಯ ರೈ ಮಾದೋಡಿ, ಚೆನ್ನಪ್ಪ ಗೌಡ ನೂಜಿ, ಅಶ್ವಿನ್ ಎಲ್ ಶೆಟ್ಟಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮೀ, ಗಂಗಾಧರ ಪೆರಿಯಡ್ಕ ಹಾಗೂ ತಿಮ್ಮಪ್ಪ ಬನಾರಿ, ವಲಯ ಮೇಲ್ವಿಚಾರಕ ವಸಂತ ಎಸ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಆ.30: ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಗೊಂಡ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಆ.30ಕ್ಕೆ ನಡೆಯುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಛೇರಿಯಲ್ಲಿ ನಡೆಯುವ ಬ್ಯಾಂಕಿನ ಮಹಾಸಭೆಯಲ್ಲಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರವರು ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಲಿದ್ದಾರೆ.
14ನೇ ಬಾರಿ ಪ್ರಶಸ್ತಿ-ಸಂತಸ ತಂದಿದೆ
ಪ್ರತಿಷ್ಟಿತ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ 2024-25ರ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ 14 ನೇ ಬಾರಿಗೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತೀವ ಸಂತಸವಾಗಿದೆ. ಆ.30ರಂದು ದ.ಕ.ಜಿ.ಕೇ.ಸ. ಬ್ಯಾಂಕಿನ ಮಹಾಸಭೆಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದು ಈ ಪ್ರಶಸ್ತಿಗೆ ಕಾರಣಕರ್ತರಾದ ನಮ್ಮ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ, ಸಹಕಾರಿ ಸಂಘದ ಗೌರವನ್ವಿತ ಸದಸ್ಯರುಗಳಿಗೆ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರಕುಮಾರ್ರವರಿಗೆ, ಎಲ್ಲಾ ನಿರ್ದೇಶಕರುಗಳಿಗೆ ಮತ್ತು ನಮ್ಮ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿರವರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಹೃತ್ಫೂರ್ವಕ ಕೃತಜ್ಙತೆಗಳನ್ನು ಸಲ್ಲಿಸುತ್ತಿದ್ದೇನೆ.
ತಾರಾನಾಥ ಕಾಯರ್ಗ,
ಅಧ್ಯಕ್ಷರು, ಸವಣೂರು ಪ್ರಾ.ಕೃ.ಪ.ಸ.ಸಂಘ