ವಿಜೃಂಭಿಸಿದ ಫಿಲೋಮಿನಾ ಶ್ರೀ ಗಣೇಶೋತ್ಸವದ 43ರ ಸಂಭ್ರಮ

0


ಹಬ್ಬಕ್ಕೆ ಅದರದ್ದೇ ಪ್ರಾತಿನಿಧ್ಯ, ಪಾವಿತ್ರ್ಯತೆ, ಸಂಪ್ರದಾಯ, ಮಹತ್ವವಿದೆ-ವಂ|ಆಂಟನಿ ಪ್ರಕಾಶ್


ಪುತ್ತೂರು: ಸ್ವಾತಂತ್ರ್ಯಕ್ಕೆ ರಾಷ್ಟ್ರೀಯತೆ ಎನ್ನುವ ಟಾನಿಕ್ ಬೇಕಾಗಿದ್ದರಿಂದ ಜೊತೆಗೆ ದೇವರ ಹೆಸರಲ್ಲಿ ಸಮಾಜ ಒಗ್ಗೂಡಬೇಕು, ಆತ್ಮೀಯತೆ ಬೆಳೆಸಿಕೊಳ್ಳಬೇಕೆಂದು ಅಂದು ಬಾಲ ಗಂಗಾಧರ ತಿಲಕ್‌ರವರು ಈ ಗಣೇಶ ಹಬ್ಬವನ್ನು ಆಚರಿಸಲು ಕಾರಣವಾಗಿತ್ತು. ಪ್ರತಿ ಹಬ್ಬಕ್ಕೆ ಅದರದ್ದೇ ಆದ ಪ್ರಾತಿನಿಧ್ಯ, ಪಾವಿತ್ರ್ಯತೆ, ಸಂಪ್ರದಾಯ, ಮಹತ್ವವಿದೆ ಎಂದು ಸಂತ ಫಿಲೋಮಿನಾ(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಹೇಳಿದರು.


ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ ಪ್ರಸ್ತುತ ೪೩ನೇ ವರುಷದ ಸಂಭ್ರಮ. ಇದರ ಪ್ರಯುಕ್ತ ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆ.27 ಹಾಗೂ ೨೮ ರಂದು ಎರಡು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಲ್ಲಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರತಿ ವಿಗ್ರಹಗಳು ವಿಶ್ವಾಸದ, ಭಾವನೆಯ ಸಂಕೇತಗಳಾಗಿವೆ. ಪ್ರತಿ ಹಬ್ಬಗಳು ಕೇವಲ ಧಾರ್ಮಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ಮಹತ್ವ ಪಡೆದಿದೆ. ಗಣಗಳ ಒಡೆಯ ಈಶ. ಈಶನ ಗಣ ಆಗಬೇಕಾದರೆ ನಾವು ಒಳ್ಳೆದನ್ನು ಕೇಳುವವರಾಗಬೇಕು ಹಾಗೂ ನೋಡುವವರಾಗಬೇಕು ಎಂದರು.


ಒಗ್ಗೂಡಿ, ಸಹಬಾಳ್ವೆಯಲ್ಲಿ ಬಾಳಿದಾಗ ಜೀವನ, ಸಮಾಜ ಸುಭೀಕ್ಷೆ-ವಂ|ಅಶೋಕ್ ರಾಯನ್:
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಮಾತನಾಡಿ, ಗಣೇಶೋತ್ಸವ ಆಚರಣೆಯ ಸಂಭ್ರಮದ ಉದ್ಧೇಶ ಜನರನ್ನು ಒಗ್ಗೂಡಿಸುವುದು ಮಾತ್ರವಲ್ಲ ಜೀವನದಲ್ಲಿ ಹಾಗೂ ಸಮಾಜದಲ್ಲಿ ನಾವೆಲ್ಲ ಸಹಬಾಳ್ವೆಯಂತೆ ಬಾಳಿದಾಗ ಸಮಾಜ ಸುಭೀಕ್ಷೆ ಎನಿಸುತ್ತದೆ. ಸಮಾಜದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ವಿಭಜನೆ, ದ್ವೇಷ ಕಾಣುತ್ತಿದ್ದು ಇವುಗಳಿಂದ ಪ್ರೀತಿ, ಸಹಬಾಳ್ವೆ ಅಸಾಧ್ಯ ಜೊತೆಗೆ ಸಮಸ್ಯೆಗಳು ಉದ್ಭವಿಸುತ್ತವೆ ಎಂದ ಅವರು ಗಣೇಶೋತ್ಸವವು ಮೌಲ್ಯಭರಿತ ಜೀವನಕ್ಕೆ ಪ್ರೇರಣೆಯಾಗಿದೆ. ಕರುಣೆ, ದಯೆ, ಪ್ರೀತಿ, ವಿಶ್ವಾಸ, ಒಳ್ಳೆತನವನ್ನು ನಾವು ನಮ್ಮೊಳಗೆ ತುಂಬಿಸಿದಾಗ ಸಮಾಜದಲ್ಲಿ ಬದಲಾವಣೆ ಅದು ನಮ್ಮಿಂದ ಆಗುತ್ತದೆ ಎಂದು ಅವರು ಹೇಳಿದರು.


ಕಾಲೇಜು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:
ಶೈಕ್ಷಣಿಕ ಕ್ಷೇತ್ರದಲ್ಲಿ ಫಿಲೋಮಿನಾ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಬಿಎಸ್ಸಿಯಲ್ಲಿ ಸನ್ಮತಿ ಎಸ್(2ನೇ ರ‍್ಯಾಂಕ್), ಬಿಸಿಎಯಲ್ಲಿ ಚೈತಾಲಿ ಎಸ್(4ನೇ), ಎಂಎಸ್ಸಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಲಾವಣ್ಯ ಕೆ(1ನೇ), ಎಂ.ಎಸ್.ಡಬ್ಲ್ಯೂನಲ್ಲಿ ಅರ್ಪಿತಾ(3ನೇ), ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಹಾಗೂ ಡಿಸ್ಟಿಂಕ್ಷನ್ ಗಳಿಸಿದ ಕಲಾ ವಿಭಾಗದಲ್ಲಿ ಧ್ರುವ ಜಗದೀಶ್ ಭಂಡಾರಿ, ವಾಣಿಜ್ಯ ವಿಭಾಗದಲ್ಲಿ ಎಂ.ದೀಪ ನಾಯಕ್, ನೀತಿ ಎನ್.ಬಿ, ಆನ್ಸಿನಾ ರೆಜಿ(ರಾಜ್ಯದಲ್ಲಿ 9ನೇ), ವಿಜ್ಞಾನ ವಿಭಾಗದಲ್ಲಿ ಆಕಾಶ್ ಪಿ.ಜೆರವರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.


ಕ್ರೀಡಾಪಟುಗಳಿಗೆ ಸನ್ಮಾನ:
ಕ್ರೀಡಾ ಕ್ಷೇತ್ರದಲ್ಲಿ ಪ್ರಜ್ವಲಿಸಿದ ಫಿಲೋಮಿನಾ ಕಾಲೇಜಿನ ಕ್ರೀಡಾಪಟುಗಳಾದ ಅಂತಿಮ ಬಿಕಾಂನ ಶಬರೀಶ್ ರೈ(ವೈಟ್‌ಲಿಪ್ಟಿಂಗ್), ದ್ವಿತೀಯ ಬಿಎಸ್ಸಿಯ ಚೈತ್ರಿಕಾ ಎಂ(ಅಥ್ಲೆಟಿಕ್ಸ್), ದ್ವಿತೀಯ ಬಿಸಿಎಯ ವರ್ಷಾ(ಅಥ್ಲೆಟಿಕ್ಸ್), ದ್ವಿತೀಯ ಬಿಎಯ ರಂಜಿತ್ ಕುಮಾರ್ ಎಂ(ವೈಟ್‌ಲಿಪ್ಟಿಂಗ್), ಪ್ರಥಮ ಬಿಕಾಂನ ಕೆ.ಆರ್ ಯಶ್ವಿನ್(ವೈಟ್‌ಲಿಪ್ಟಿಂಗ್), ಪ್ರಥಮ ಬಿಕಾಂನ ಪ್ರಥ್ವಿ ಕೆ(ವೈಟ್‌ಲಿಪ್ಟಿಂಗ್), ಅಂತಿಮ ಬಿಎಸ್ಸಿಯ ಶಿವಾನಿ ಮಾಚಯ್ಯ(ವೈಟ್‌ಲಿಪ್ಟಿಂಗ್), ದ್ವಿತೀಯ ಬಿಎಯ ಮುಹಮ್ಮದ್ ಸಿಮರುಲ್ ಹಕ್(ವೈಟ್‌ಲಿಪ್ಟಿಂಗ್), ದ್ವಿತೀಯ ಬಿಸಿಎಯ ಅಭಿಜಿತ್(ವೈಟ್‌ಲಿಪ್ಟಿಂಗ್), ಅಂತಿಮ ಬಿಕಾಂನ ತನ್ವೀರ್ ಜೆರೋಮ್ ಪಿಂಟೊ(ಈಜು), ದ್ವಿತೀಯ ಬಿಎಯ ಶಿಶಿಲ್(ಈಜು)ರವರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.


ಅಭಿನಂದನೆ:
ಶ್ರೀ ಗಣೇಶೋತ್ಸವ ಪ್ರಯುಕ್ತ ಹಮ್ಮಿಕೊಂಡ ಫಿಲೋಮಿನಾ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ಮತ್ತು ಹಿರಿಯ ವಿದ್ಯಾರ್ಥಿಗಳ ಹಗ್ಗ-ಜಗ್ಗಾಟ ಹಾಗೂ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.


ರಂಜಿಸಿದ ಜಗತ್ತೇ ಶೂನ್ಯ ಸ್ವಾಮಿ ನಾಟಕ:
ಆ.28 ರಂದು ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದರು ಕುಡ್ಲ ಅಭಿನಯಿಸುವ ರಂಗ್‌ದ ರಾಜೆ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ, ತುಳುನಾಡ ಕಲಾ ಬಿರ್ಸೆ ದೀಪಕ್ ರೈ ಪಾಣಾಜೆ, ಮಂಗಳೂರು ಮೀನನಾಥ ರಾಘವೇಂದ್ರ ರೈ ಅಭಿನಯದಲ್ಲಿ ಜಗತ್ತೇ ಶೂನ್ಯ ಸ್ವಾಮಿ ತುಳು ಹಾಸ್ಯಮಯ ನಾಟಕವು ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮನರಂಜಿಸಿತು.


ಶೃಂಗಾರಮಯ:
43ನೇ ಸಂಭ್ರಮಾಚರಣೆಯ ಪ್ರಯುಕ್ತ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕಾಲೇಜಿನ ವಿದ್ಯಾರ್ಥಿ ಘಟಕದಿಂದ ವಿನಾಯಕ ನಗರವು ಕೇಸರಿಮಯದಿಂದ ಹಾಗೂ ಲೈಟಿಂಗ್ಸ್‌ಗಳಿಂದ ಕಂಗೊಳಿಸುತ್ತಿತ್ತು. ಸುಮಾರು ೬೦ ಫೀಟ್ ಎತ್ತರದ ಭಗವಾಧ್ವಜ ಸೇರಿದಂತೆ ವಿನಾಯಕ ನಗರದಿಂದ ದರ್ಬೆ ಜಂಕ್ಷನ್‌ವರೆಗೆ ರಸ್ತೆಯ ಡಿವೈಡರ್‌ನಲ್ಲಿ ಕೇಸರಿ ಬಾವುಟಗಳು, ಕೇಸರಿ ತೋರಣಗಳು, ಫ್ಲೆಕ್ಸ್, ವಿದ್ಯುದ್ಧೀಪಕಾರಗಳಿಂದ ವಿನಾಯಕ ನಗರವು ಶೃಂಗಾರಮಯಗೊಂಡಿದೆ.


ವೇದಿಕೆಯಲ್ಲಿ ಸಂತ ಫಿಲೋಮಿನಾ ಶ್ರೀ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಫಿಲೋಮಿನಾ ಶ್ರೀ ಗಣೇಶೋತ್ಸವ ಉತ್ಸವ ಸಮಿತಿ ಕಾರ್ಯದರ್ಶಿ ಸೂರಜ್ ನಂದ ಉಪಸ್ಥಿತರಿದ್ದರು. ಫಿಲೋಮಿನಾ ಶ್ರೀ ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಆನ್ವೇಷ್ ರೈ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರಚಿತಾ ಆರ್.ಕಲ್ಲಾರೆ ವಂದಿಸಿದರು. ವಿಂದ್ಯಾಶ್ರೀ ರೈ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಚರಣ್‌ರವರು ಸನ್ಮಾನಿತರ ಪಟ್ಟಿ ವಾಚಿಸಿದರು. ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಿವಪ್ರಸಾದ್ ಎ, ಕೋಶಾಧಿಕಾರಿ ದುರ್ಗಾಪ್ರಸಾದ್, ಟ್ರಸ್ಟಿಗಳಾದ ಡಾ.ಅಶೋಕ್ ಕುಮಾರ್ ರೈ, ಮಂಜುನಾಥ್ ಡಿ, ಸಿಎ ಅನಂತಪದ್ಮನಾಭ ಕೆ, ಕೆ.ವಿಶ್ವಾಸ್ ಶೆಣೈ, ಶ್ರೀಧರ ಹೆಗ್ಡೆ, ಜನಾರ್ದನ ಎಸ್.ಭಟ್, ವೆಂಕಟಕೃಷ್ಣ ಎಂ.ಎನ್, ದಿನೇಶ್ ಪ್ರಸನ್ನ, ನಾಗೇಶ್ ಪೈ, ಬೆಟ್ಟ ಪಿ.ಎಸ್ ನಾಗಾರಾಜ, ದೇಲಂತಿಮಾರು ನಿತ್ಯಾನಂದ ಶೆಟ್ಟಿ, ಹರಿಣಿ ಪುತ್ತೂರಾಯ, ವೇಣುಗೋಪಾಲ್ ಪಿ.ಎಲ್, ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ವರ್ಷಾ ಕಾರ್ಯಕ್ರಮ ನಿರೂಪಿಸಿದರು.

ವಿಗ್ರಹ ಪ್ರತಿಷ್ಠಾಪನೆ..
ಬೆಳಿಗ್ಗೆ ಪರ್ಲಡ್ಕದಿಂದ ಶ್ರೀ ಗಣೇಶನ ವಿಗ್ರಹವನ್ನು ತಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಬಳಿಕ ಮುಖ್ಯರಸ್ತೆಯಾಗಿ ದರ್ಬೆ ವಿನಾಯಕ ನಗರದ ವಿನಾಯಕ ಮಂಟಪದಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಟಾಪನೆಗೊಳಿಸಲಾಯಿತು. ಕುಕ್ಕಾಡಿ ತಂತ್ರಿಗಳಾದ ಅರ್ಚಕ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಿದವು.

ಶಾಸಕರ ಭೇಟಿ-ಪ್ರಶಂಸೆ..
ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿರುವ ಶಾಸಕ ಅಶೋಕ್ ಕುಮಾರ್ ರೈರವರು ಸಂಜೆ ಆಗಮಿಸಿ ಗಣೇಶೋತ್ಸವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಮಾತ್ರವಲ್ಲ ಕಳೆದ ೪೩ ವರ್ಷಗಳಿಂದ ವಿನಾಯಕ ನಗರದಲ್ಲಿ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ವಿದ್ಯಾರ್ಥಿಗಳಿಂದ ಅದ್ದೂರಿಯಾಗಿ ಆಚರಿಸುತ್ತಿದ್ದು ಕಾರ್ಯಕ್ರಮವನ್ನು ಪ್ರಶಂಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಆಗಮಿಸಿ ಶುಭ ಹಾರೈಸಿದರು.

ಸನ್ಮಾನ..
ಕಳೆದ 30 ವರ್ಷಗಳಿಂದ ತನ್ನ ಕೈಚಳಕದಿಂದ ಮಣ್ಣಿನ ಆಕಾರದ ಮೂರ್ತಿಯ ಕಾಯಕವನ್ನು ಮಾಡುತ್ತಿದ್ದು, ಪ್ರತಿ ವರ್ಷ ಸರಿಸುಮಾರು 50 ಮೂರ್ತಿಗಳನ್ನು ರಚನೆ ಮಾಡುತ್ತಿರುವ ತಾರಾನಾಥ ಆಚಾರ್ಯ ಪರ್ಲಡ್ಕರವರನ್ನು ಹಾಗೂ ದೂರದ ಕೊಯಮತ್ತೂರಿನಲ್ಲಿದ್ದು ಪ್ರತಿ ವರ್ಷ ಫಿಲೋಮಿನಾ ಗಣೇಶೋತ್ಸವಕ್ಕೆ ಆಗಮಿಸುತ್ತಿದ್ದು ಟ್ರಸ್ಟ್ ಸದಸ್ಯ ಇತ್ತೀಚೆಗೆ ಅಗಲಿದ ರಮೇಶ್ ಶೆಣೈರವರ ಸ್ಮರಣಾರ್ಥ ಅವರ ಪತ್ನಿ ರಾಧಿಕಾ ಶೆಣೈರವರು ಫಿಲೋಮಿನಾ ಕಾಲೇಜಿನಲ್ಲಿ ಕಲಿಕೆ ಹಾಗೂ ವೈಟ್‌ಲಿಪ್ಟಿಂಗ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿರುವ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸ್ಪಂದನಾ ಕೆ.ರವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಅದ್ದೂರಿ ಶೋಭಾಯಾತ್ರೆ..
ಆ.28ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ ನಡೆದಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಈ ಅನ್ನಸಂತರ್ಪಣೆಯಲ್ಲಿ ಸುಮಾರು ನಾಲ್ಕು ಸಾವಿರ ಭಕ್ತರು ಪಾಲ್ಗೊಂಡರು. ಬೆಳಿಗ್ಗೆ ಬೊಳ್ವಾರು ಶ್ರೀ ದುರ್ಗಾ ಮಲರಾಯ ಉಳ್ಳಾಲ್ತಿ ಯಕ್ಷಕಲಾ ಪ್ರತಿಷ್ಠಾನದ ಕಲಾವಿದರಿಂದ ತಾಳಮದ್ದಳೆ ನಡೆಯಿತು. ಸಂಜೆ ಗಣಪತಿಯ ಅದ್ದೂರಿ ಶೋಭಾಯಾತ್ರೆಯು ಚೆಂಡೆ ವಾದ್ಯ ಹಾಗೂ ನಾಸಿಕ್ ಬ್ಯಾಂಡ್‌ನೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಾರಾಡಿಯ ಬಾವಿಯಲ್ಲಿ ವಿಸರ್ಜನೆಗೊಂಡಿತು.

LEAVE A REPLY

Please enter your comment!
Please enter your name here