ಪುತ್ತೂರು: ಶಾಂತಿಗೋಡು ಗ್ರಾಮದ ಆನಡ್ಕ ಮಲೆಪಡ್ಪು ದಿ. ಕರಿಯಪ್ಪ ಗೌಡರ ಪತ್ನಿ ಬಾಲಕ್ಕ (88 ವ)ರವರು ಅಲ್ಪಕಾಲದ ಅಸೌಖ್ಯದಿಂದ ಅ.27ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಆನಡ್ಕ ಜಂಕ್ಷನ್ ಬಳಿ ಸುದ್ದಿ ಬಿಡುಗಡೆ ಪೇಪರ್ ಏಜೆಂಟ್ ಹಾಗೂ ನರಿಮೊಗರು ಗ್ರಾ.ಪಂ ಮಾಜಿ ಸದಸ್ಯ, ಆನಡ್ಕದಲ್ಲಿ ಅಂಗಡಿಯನ್ನು ಹೊಂದಿರುವ ಪದ್ಮಯ್ಯ ಗೌಡ, ಕಬಕದಲ್ಲಿ ಮೆಡಿಕಲ್ ಶಾಪ್ ಹೊಂದಿರುವ ಕುಶಾಲಪ್ಪ ಗೌಡ, ಪುತ್ರಿಯರಾದ ಪದ್ಮಾವತಿ, ಜಾನಕಿ, ರಾಮಕ್ಕ, ದುಗ್ಗಮ್ಮ, ಯಮುನಾ, ಸೊಸೆಯಂದಿರಾದ ವನಜಾಕ್ಷಿ, ಪುಷ್ಪ, ಅಳಿಯಂದಿರಾದ ಚಂದಪ್ಪ ಗೌಡ ಪೋಳ್ಯ, ಯಶೋಧರ ಗೌಡ ಓಜಾಲ, ಶ್ರೀನಿವಾಸ ಗೌಡ ಮತ್ತು ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.