ಎವಿಜಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ – ಹಿರಿಯ ಶಿಕ್ಷಕಿಗೆ ಸನ್ಮಾನ, ಗುರುವಂದನೆ

0

ಪುತ್ತೂರು: ಹಿರಿಯ ಶಿಕ್ಷಕರನ್ನು ಸನ್ಮಾನಿಸಿ, ಗುರುವಂದನೆ ನೀಡುವ ಮೂಲಕ ಬನ್ನೂರು ಕೃಷ್ಣನಗ ಅಲುಂಬುಡದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ.5 ರಂದು ಶಿಕ್ಷಕರ ದಿನವನ್ನು ಆಚರಿಸಲಾಯಿತು.


ನಿವೃತ್ತ ಪ್ರಾಂಶುಪಾಲೆ ಪ್ರೇಮಲತಾ ರೈ ರವರನ್ನು ಸನ್ಮಾನಿಸಿ ಗೌರವಿಸಿ, ಗುರುವಂದನೆ ಮಾಡಲಾಯಿತು. ಸಂಸ್ಥೆಯ ಸಂಚಾಲಕ ಎ ವಿ ನಾರಾಯಣ ದಂಪತಿ ತಮ್ಮ ಗುರುಗಳಾದ ಪ್ರೇಮಲತಾ ರವರನ್ನು ಗೌರವಿಸಿ ಆಶೀರ್ವಾದ ಪಡೆದುಕೊಂಡರು. ಸನ್ಮಾನಿತರು ಮಾತನಾಡಿ, ಜೀವನದ ಗುರಿಗಳನ್ನು ತಲುಪಲು ಶಿಕ್ಷಣವು ಎಲ್ಲರಿಗೆ ಅಗತ್ಯ. ಸಮಾಜದಲ್ಲಿ ಗುರುವಿಗಿಂತ ಉನ್ನತ ಸ್ಥಾನ ಬೇರೊಂದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿತಿ ಮಹಾಲಿಂಗೇಶ್ವರ ಐಟಿಐ ನ ನಿವೃತ್ತ ಪ್ರಾಂಶುಪಾಲ ಭವಾನಿ ಶಂಕರ ಪರಂಗಾಜೆ ಅವರು ಮಾತನಾಡಿ, ಡಾ. ರಾಧಾಕೃಷ್ಣನ್ ರವರು ಒಬ್ಬ ಶಿಕ್ಷಣ ತಜ್ಞ, ಒಬ್ಬ ತತ್ವಜ್ಞಾನಿ ,ಒಬ್ಬ ರಾಜಕೀಯ ಮುತ್ಸದ್ದಿ ಹೀಗೆ ಹಲವು ಆಯಾಮಗಳಲ್ಲಿ ತೆರೆದುಕೊಳ್ಳುವ ವ್ಯಕ್ತಿತ್ವ ಅವರ ಜೀವನದ ನಡೆ ನಮಗೆ ಆದರ್ಶ ಎಂದರು. ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಮಾತನಾಡಿ ಕಲಿಸಿದ ಶಿಕ್ಷಕರನ್ನು ನೆನೆದುಕೊಂಡು ತನ್ನ ಬೆಳವಣಿಗೆಯಲ್ಲಿ ಗುರುಗಳ ಪಾತ್ರವನ್ನು ತಿಳಿಸಿದರು.

ಸಂಸ್ಥೆಯ ಪ್ರಾಂಶುಪಾಲ ಅಮರನಾಥ ಪಟ್ಟೆ ರವರು ಮಾತನಾಡಿ ದಿನದ ಮಹತ್ವದ ಸಂದೇಶವನ್ನು ನೀಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ, ವಿದ್ಯಾರ್ಥಿ ಅನುಪ್ ರಾಜ್ ಸಂದರ್ಭೋಚಿತವಾಗಿ ಮಾತನಾಡಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದದವರಿಗೆ ಶಾಲು ಹಾಗೂ ಗುಲಾಬಿಯನ್ನು ನೀಡಿ ಅಭಿನಂದಿಸಲಾಯಿತು. ಶಿಕ್ಷಕರಿಗೆ ವಿವಿಧ ಮನೋಲ್ಲಾಸ ಆಟಗಳನ್ನು ಆಯೋಜಿಸಿದ್ದು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಆಡಳಿತಮಂಡಳಿಯ ನಿರ್ದೇಶಕರಾದ ಪುಷ್ಪಾವತಿ ಕಳುವಾಜೆ ಪ್ರಧಾನ ಕಾರ್ಯದರ್ಶಿ ಶಾಲೆಯ ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ ,ಉಪಾಧ್ಯಕ್ಷ ಉಮೇಶ್ ಮಳುವೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಗಂಗಾಧರ ಗೌಡ ,ಸೀತಾರಾಮ ಕೇವಳ, ಶ್ರೀಮತಿ ಪ್ರತಿಭಾ ದೇವಿ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು ,ಬೋಧಕ- ಬೋಧಕೇತರ ವೃಂದ, ವಿದ್ಯಾರ್ಥಿ -ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಶಿವಾನಿ, ಆನ್ವಿ ಸುವೀಕ್ಷ ಪ್ರಾರ್ಥಿಸಿ, ಅದ್ವಿತಿ ಬಂಜನ್ ಸ್ವಾಗತಿಸಿ ,ಗನ್ವಿತ್ ವಂದಿಸಿದರು. ವಿಖ್ಯಾತ್ ಸಂವಿಧಾನದ ಪೀಠಿಕೆಯನ್ನು ವಾಚಿಸಿ, ಅದ್ವಿಕ್ ಬಂಜನ್ ಹಾಗೂ ಎ ಎನ್ ಜೋಶ್ನ ಗೌಡ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here