ಪುತ್ತೂರು: ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದುಗ್ಗಪ್ಪ ಎನ್.ರವರು ನೇಮಕಗೊಂಡಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರಕಾರ ಈ ಆಯ್ಕೆ ಮಾಡಿರುತ್ತದೆ. ಜೊತೆಗೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿ ಜೆರೋಮಿಯಸ್ ಪಾಯಿಸ್ ಕಾವೇರಿಕಟ್ಟೆ, ಸಂಕಪ್ಪ ರೈ, ಸಿಲ್ವೆಸ್ಟರ್ ಡಿ’ಸೋಜ ಕೂರ್ನಡ್ಕ, ದಾಮೋದರ ಭಂಡಾರ್ಕರ್ ನೆಲ್ಲಿಕಟ್ಟೆ , ಇಸ್ಮಾಯಿಲ್ ಸಾಲ್ಮರ, ಇಲ್ಯಾಸ್ ಮೊಹಮ್ಮದ್, ವಾಲ್ಟರ್ ಡಿ’ಸೋಜ ಸಿದ್ಯಾಲ, ದಿನೇಶ್ ಕಾಮತ್, ಸೀತಾರಾಮ ಸಿ ಚಿಕ್ಕಪುತ್ತೂರು, ಕೃಷ್ಣಪ್ಪ ಪೂಜಾರಿ, ಶ್ರೀಮತಿ ಮೋಹಿನಿರವರು ಆಯ್ಕೆಯಾಗಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಪ್ರೊ|ಸುಬ್ಬಪ್ಪ ಕೈಕಂಬರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.