ಬಡಗನ್ನೂರು: ಕೊಯಿಲ ಬಡಗನ್ನೂರು ಸ. ಹಿ. ಪ್ರಾ. ಶಾಲೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ನೀರಿನ ಟ್ಯಾಂಕನ್ನು ಗ್ರಾ. ಪಂ ವತಿಯಿಂದ ತೆರವು ಕಾರ್ಯ ಸೆ. 8ರಂದು ನಡೆಯಿತು.
ಶಾಲಾ ಹಳೆಯ ನೀರಿನ ಟ್ಯಾಂಕ್ ಭಾರಿ ಮಳೆಯಿಂದಾಗಿ ಕುಸಿದು ಬೀಳುವ ಅಪಾಯಕಾರಿ ಸ್ಥಿತಿಯಲ್ಲಿತ್ತು. ಬೀಳುವ ಹಂತದಲ್ಲಿರುವ ಅಪಾಯಕಾರಿ ನೀರಿನ ಟ್ಯಾಂಕನ್ನು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತೆರವುಗೊಳಿಸುವಂತೆ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ ರವರು ಮನವಿ ಸಲ್ಲಿಸಿದ್ದರು.
ಮನವಿಗೆ ಬಡಗನ್ನೂರು ಗ್ರಾ. ಪಂ ಅಧ್ಯಕ್ಷೆ ಪುಷ್ಷಲತಾ ಎಂ, ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯ ಸಂತೋಷ ಆಳ್ವ ಗಿರಿಮನೆ ಹಾಗೂ ಅಭಿವೃದ್ಧಿ ಅಧಿಕಾರಿ ಬಿ. ಕೆ ಸುಬ್ಬಯ್ಯ ತಕ್ಷಣ ಸ್ಪಂದಿಸಿ ಜೆಸಿಬಿ ಮೂಲಕ ಟ್ಯಾಂಕ್ ತೆರವು ಕಾರ್ಯ ನಡೆಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ವಸಂತಗೌಡ ,ಉಪಾಧ್ಯಕ್ಷ ಸತೀಶ್ ಒ, ಜಗದೀಶ್ ತಲೆಂಜಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಸಹಕರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ, ಸಹ ಶಿಕ್ಷಕ ಗಿರೀಶ್ ಉಪಸ್ಥಿತರಿದ್ದರು.