
ಪುತ್ತೂರು: ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಪರ ಹಾಗೂ ವಿರೋಧ ವ್ಯಕ್ತಪಡಿಸಿ, ಇದೇ ಸೆ.9ರಂದು ಎರಡು ಸಂಘಟನೆಗಳು ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಪೊಲೀಸ್ ಇಲಾಖೆ ಬ್ರೇಕ್ ನೀಡಿದ್ದು, ಪುತ್ತೂರಿನಿಂದು ತೆರಳಿದ ನೂರಾರು ಕಾರ್ಯಕರ್ತರನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದಿದ್ದಾರೆ.
ಪುತ್ತೂರು ಹಿಂದು ಜಾಗರಣ ವೇದಿಕೆ ಪ್ರಮುಖರಾದ ದಿನೇಶ್ ಪಂಜಿಗ, ಶಿವಪ್ರಸಾದ್ ಶಾಂತಿಗೋಡು, ಕೀರ್ತನ ಸವಣೂರು, ಧನುಷ್, ಭವಿತ್ , ತೇಜಸ್, ಹೇಮಂತ್, ಸುಹಾಸ್, ಲೋಕನಾಥ್ ಭಂಡಾರಿ ಸಹಿತ ಹಲವಾರು ಮಂದಿಯನ್ನು ಮೈಸೂರಿನ ಅಲೆನಹಳ್ಳಿ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ.