ಪುತ್ತೂರು: 10 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಗೆ ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಪುತ್ತೂರು ನ್ಯಾಯಾಲಯ ಆರೋಪಿತರಿಗೆ ಶಿಕ್ಷೆ ವಿಧಿಸಿ ತೀರ್ಪುನೀಡಿದೆ.
2015 ರ ಅ.4 ರಂದು ಪುತ್ತೂರು ಅಳಿಕೆ ಮಾರ್ಗ ವಾಗಿ ಸಂಚಾರ ಮಾಡುತ್ತಿದ್ದ (ಕೆ ಏ 19 ಎಫ್ 2593) ಕೆ ಎಸ್ ಆರ್ ಟಿ ಸಿ ಬಸ್ ಕಬಕ ಗ್ರಾಮದ ಮುರ ಎಂಬಲ್ಲಿಗೆ ತಲುಪುತ್ತಿದ್ದಾಗ ಆರೋಪಿಗಳಾದ ಇರ್ಫಾನ್ ಕಬಕ ಗ್ರಾಮ, ಮಹಮ್ಮದ್ ಇರ್ಫಾನ್ ಕೊಡಿಪ್ಪಾಡಿ ಗ್ರಾಮ, ತೋಹಮನ್ ಕಬಕ ಗ್ರಾಮ ಎಂಬುವರು ತಮ್ಮ (ಕೆ ಎ 21 ಹೆಚ್ 7364) ಸಂಖೆಯ ಮೋಟರ್ ಸೈಕಲ್ ನಲ್ಲಿ ಬಂದು ಬಸ್ಸಿಗೆ ಅಡ್ಡ ಇಟ್ಟು ತಡೆದು, ನಿಲ್ಲಿಸಿ ಬೈಕ್ ನಿಂದ ಇಳಿದು ಬಸ್ ಡೋರನ್ನು ಹತ್ತಿ ಬಸ್ಸಿನ ಚಾಲಕನನ್ನು ಎಳೆದು ಅಂಗಿಗೆ ಕೈ ಹಾಕಿ ಮಾರ್ಗದಲ್ಲಿ ದೂಡಿ ಹಾಕಿ ಆಪಾದಿತರೆಲ್ಲರೂ ಸೇರಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬಸ್ಸಿನ ಸೈಡ್ ಮಿರರನ್ನು ಪುಡಿಮಾಡಿ 2೦೦ ರೂಪಾಯಿ ನಷ್ಟು ಉಂಟು ಮಾಡಿದ ಪ್ರಕರಣದಲ್ಲಿ ಪುತ್ತೂರು ನಗರ ಠಾಣೆಯ ಆಗಿನ ತನಿಖಾಧಿಕಾರಿ ಉಪನಿರೀಕ್ಷ ಅಬ್ದುಲ್ ಆರೋಪಿಗಳ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಸದ್ರಿ ಪ್ರಕರಣದಲ್ಲಿ ಪ್ರಧಾನ ಹಿರಿಯ ಸಿವಿಲ್ ಮತ್ತು ಎ ಸಿ ಜೆ ಎಂ ನ್ಯಾಯಾಲಯದ ನ್ಯಾಯಾಧೀಶ ಪ್ರಕೃತಿ ಕಲ್ಯಾಣಪುರ್ ರವರು ಆರೋಪಿಗಳ ಮೇಲೆ ಆರೋಪ ಸಾಬೀತಾಗಿದೆ ಎಂದು ಶಿಕ್ಷೆಯನ್ನು ವಿಧಿಸಿರುತ್ತಾರೆ. ಸರ್ಕಾರದ ಪರ ಸಹಾಯಕ ಸರಕಾರಿ ಅಭಿಯೋಜಕರಾಗಿ ಕವಿತಾ ಕೆ ರವರು ವಾದಿಸಿದರು.