ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ 2024-25

0

3,06,05,258 ರೂ. ವ್ಯವಹಾರ, ರೂ. 1,38 ಲಕ್ಷ ನಿವ್ವಳ ಲಾಭ- ಕೃಷ್ಣ ಭಟ್ ಕುಕ್ಕುಜೆ

ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ 3,06,05,258 ರೂ.ಗಳ ವ್ಯವಹಾರವನ್ನು ನಡೆಸಿ,1.38 ರೂ.ಲಕ್ಷ ನಿವ್ವಳ ಲಾಭ ಪಡೆದಿರುತ್ತದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆರವರು ಹೇಳಿದರು.

ಅವರು ಸೆ.10ರಂದು ಸವಣೂರು ಯುವ ಸಭಾಭವನದಲ್ಲಿ ಜರಗಿದ ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಎಲ್ಲಾ ಸದಸ್ಯರುಗಳು ಮತ್ತು ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಪ್ರೋತ್ಸಾಹದಿಂದ ಸಂಘವು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ವರದಿ ಸಾಲಿನಲ್ಲಿ ಸದಸ್ಯರುಗಳಿಗೆ ಶೇ.10 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 34 ಪೈಸೆ ಬೋನಸ್ ಅನ್ನು ನೀಡಲಾಗುವುದು ಎಂದ ಅವರು, ಸಂಘವು 40ನೇ ವರುಷದಲ್ಲಿ ಮುನ್ನಡೆಯುತ್ತಿದ್ದು, ಹೈನುಗಾರರ ನಿರಂತರ ಪ್ರೋತ್ಸಾಹದಿಂದ ಸಂಘವು ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಹೈನುಗಾರರು ಹೆಚ್ಚು ಹೆಚ್ಚು ಹಾಲನ್ನು ಸಂಘಕ್ಕೆ ಪೂರೈಕೆ ಮಾಡುವಲ್ಲಿ ಪ್ರಯತ್ನಿಸಿ, ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಸಹಕರಿಸುವಂತೆ ವಿನಂತಿಸಿದರು.

ಮನಸು ಮಾಡಬೇಕು- ಸುದರ್ಶನ್ ನಾೖಕ್  
ಸಂಘದ ಸದಸ್ಯ ಸುದರ್ಶನ್ ನಾೖಕ್ ಕಂಪ ಮಾತನಾಡಿ ಸಂಘದ ನಿರ್ದೇಶಕರುಗಳೇ ಹೆಚ್ಚಿನ ಹಾಲು ಪೂರೈಕೆ ಮಾಡುವ ಬಗ್ಗೆ ಮನಸು ಮಾಡಬೇಕು ಎಂದರು. ರೈತ ಸಂಘ ಕಡಬ ತಾಲೂಕು ಅಧ್ಯಕ್ಷ ಯತೀಂದ್ರ ಶೆಟ್ಟಿ ಮಠ, ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡರವರು ವಿವಿಧ ಸಲಹೆ-ಸೂಚನೆಯನ್ನು ನೀಡಿದರು.

ಪುಣ್ಚಪ್ಪಾಡಿಗೆ ಪ್ರತ್ಯೇಕ ಸಂಘ – ಶ್ರೀದೇವಿ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀ ದೇವಿರವರು ಮಾತನಾಡಿ ಸಂಘಕ್ಕೆ 12 ಮಂದಿ ಹೊಸ ಸದಸ್ಯರಾಗಿರುವುದು ಖುಷಿಯ ವಿಚಾರವಾಗಿದೆ. ಪುಣ್ಚಪ್ಪಾಡಿಯಲ್ಲಿ ಈಗಾಗಲೇ ಹಾಲು ಖರೀದಿ ಕೇಂದ್ರ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಪುಣ್ಚಪ್ಪಾಡಿಗೆ ಪ್ರತ್ಯೇಕ ಸಂಘ ಆಗಲಿದ್ದು, ಇದಕ್ಕೆ ಬೇಕಾದ ಪ್ರಕ್ರಿಯೆ ನಡೆಯಲಿದೆ. ಅ ಭಾಗದ ಹೈನುಗಾರಿಕಾ ಕೃಷಿಕರು ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಳ್ಳಬೇಕು. ಇದರಿಂದ ಸವಣೂರು ಬಿಎಂಸಿ ಕೇಂದ್ರಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.
.

ಶಿಬಿರಗಳನ್ನು ಹಮ್ಮಿಕೊಳ್ಳಬೇಕು- ಗಿರಿಶಂಕರ್ ಸುಲಾಯ
ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದವರು ಹೈನಗಾರಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಯಲು ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಸಂಘಕ್ಕೆ ಹೆಚ್ಚು ಹಾಲು ಪೂರೈಕೆಯಾಗಬೇಕೆಂಬ ನಿಟ್ಟಿನಲ್ಲಿ ಸಂಘದ ಸದಸ್ಯರು ಮತ್ತು ಆಡಳಿತ ಮಂಡಳಿ ಗಮನಹರಿಸಬೇಕು ಎಂದರು

ಹೆಚ್ಚು ಹಾಲು ಹಾಕಿದವರು:
ವರದಿ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ಹಾಕಿದವರಲ್ಲಿ ಪ್ರಥಮ- ಸವಣೂರು ಕೆ.ಸೀತಾರಾಮ ರೈ , ದ್ವಿತೀಯ-ಸದಾಶಿವ ರೈ, ತೃತೀಯ-ಸುದರ್ಶನ್ ನಾೖಕ್  ಕಂಪರವರುಗಳು ಗೌರವಕ್ಕೆ ಪಾತ್ರರಾಗಿದ್ದು, ಇವರುಗಳಲ್ಲಿ ಉಪಸ್ಥಿತರಿದ್ದ ಸುದರ್ಶನ್ ನಾಕ್ ಕಂಪರವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.


ಪ್ರತಿಭಾ ಪುರಸ್ಕಾರ: ಪ್ರಾಪ್ತಿ ಮೆದು, ಲಾಸ್ಯ ಮೆದು ಹಾಗೂ ಕೃಪಾಶ್ರೀರವರನ್ನು ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ನಿರ್ದೇಶಕರುಗಳಾದ ಪ್ರೇಮಚಂದ್ರ ಮೆದು, ಜಯರಾಮ ರೈ ಸೋಂಪಾಡಿ, ಸೂರಪ್ಪ ಗೌಡ ಬದಿಯಡ್ಕ, ಪದ್ಮಯ್ಯ ಗೌಡ ಪರಣೆ, ಗಂಗಾಧರ ಸುಣ್ಣಾಜೆ, ಆಶಾಲತಾ ಬರೆಮೇಲು, ಗೀತಾ ಕುದ್ಮನಮಜಲು, ಬಾಬು ಮುಗೇರು, ಪ್ರಶಾಂತ್ ಕುಮಾರ್ ಗುಂಡ್ಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ ಸ್ವಾಗತಿಸಿ, ಉಪಾಧ್ಯಕ್ಷೆ ಆಶಾ ರೈ ಕಲಾಯಿ ವಂದಿಸಿದರು. ಕಾರ್‍ಯದರ್ಶಿ ಹರೀಶ್ ವರದಿ ವಾಚಿಸಿದರು. ಸಂಘದ ಸದಸ್ಯ ರಾಜೇಶ್ ರೈ ಮುಗೇರು ಪ್ರಾರ್ಥನೆಗೈದರು.


ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕ ಗಂಗಾಧರ್ ಪೆರಿಯಡ್ಕ, ಮಾಜಿ ನಿರ್ದೇಶಕ ನಾರಾಯಣ ಗೌಡ ಪೂವ, ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಹಾಲು ಉತ್ವಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಸುಪ್ರೀತ್ ರೈ ಖಂಡಿಗ, ಮಮತಾ ರೈ ದೇವಸ್ಯ, ನ್ಯಾಯವಾದಿ ಮಹೇಶ್ ಕೆ.ಸವಣೂರು, ಸವಣೂರು ಗ್ರಾ.ಪಂ, ಮಾಜಿ ಸದಸ್ಯರುಗಳಾದ ಚಂದಪ್ಪ ಪೂಜಾರಿ ಊರುಸಾಗು, ಸತೀಶ್ ಬಲ್ಯಾಯ, ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ ಕಿನಾರ, ರಾಘವ ಗೌಡ ಸವಣೂರು ಸಹಿತ ಸವಣೂರು ಹಾಲು ಉತ್ಪಾದಕರ ಸಂಘದ ಸದಸ್ಯರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಂತಾಪ ಸೂಚನೆ: ಸಂಘದ ಮಾಜಿ ನಿರ್ದೇಶಕ ಶಂಕರ್ ನಾಕ್ ಮೆದು, ಹಾಲಿ ನಿರ್ದೇಶಕ ಗೋಪಾಲಕೃಷ್ಣ ಗೌಡ ಆರೇಲ್ತಡಿರವರ ನಿಧನಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಸಂತಾಪ ಸೂಚಿಸಲಾಯಿತು.


ಸಂಘದ ಹಸಿರು ತೋಟ ಮೇಲ್ವಿಚಾರಕ ರಮೇಶ್ , ಹಾಲು ಪರೀಕ್ಷಕಿ ಸುಜಾತ, ಸಹಾಯಕಿ ಶೋಭಾ ಹಾಗೂ ಕೃ.ಗ. ಕಾರ್ಯಕರ್ತ ಧನಂಜಯ ಸಹಕರಿಸಿದರು.

ಅತೀ ಶ್ರೀಘದಲ್ಲಿ ಆರೇಲ್ತಡಿಯಲ್ಲಿ ಹಾಲು ಖರೀದಿ ಕೇಂದ್ರ ಸಂಘದಿಂದ ಆರೇಲ್ತಡಿಯಲ್ಲಿ ಹಾಲು ಖರೀದಿ ಕೇಂದ್ರವನ್ನು ಅತೀ ಶ್ರೀಘ್ರದಲ್ಲಿ ಆರಂಭಿಸಲಾಗುವುದು. ಈಗಾಗಲೇ ಪುಣ್ಚಪ್ಪಾಡಿಯಲ್ಲಿ ಹಾಲು ಖರೀದಿ ಕೇಂದ್ರ ಮಾಡಲಾಗಿದೆ. ಅಲ್ಲಿ 175 ಲೀಟರ್ ಹಾಲು ಸಂಗ್ರಹವಾಗುತ್ತಿದೆ.
ಕೃಷ್ಣ ಭಟ್ ಕುಕ್ಕುಜೆ
ಅಧ್ಯಕ್ಷರು ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘ

LEAVE A REPLY

Please enter your comment!
Please enter your name here