ನಿಡ್ಪಳ್ಳಿ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇಲ್ಲಿಗೆ ಸುರಕ್ಷಾ ವೆಲ್ಫೇರ್ ಟ್ರಸ್ಟ್ ಹೊಸೂರ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ರಾಮಪ್ರಸಾದ್ ರೈ ಪಟ್ಟೆ ಬಾಳೆಮೂಲೆ ಇವರು ವಿದ್ಯುತ್ ಇನ್ವರ್ಟರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದರು.

ಕೆದಂಬಾಡಿ ಲಕ್ಷ್ಮೀನಾರಾಯಣ ರೈ ಈ ಕೊಡುಗೆಯನ್ನು ಕೊಡಿಸುವಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿದ್ದಲ್ಲದೇ ವಯರಿಂಗ್ ವ್ಯವಸ್ಥೆಯನ್ನು ಮಾಡಿಕೊಟ್ಟಿರುತ್ತಾರೆ. ಅಲ್ಲದೆ ಸದಾಶಿವ ರೈ ಸೂರಂಬೈಲು ಇವರು ಕೂಡ ಈ ಕೊಡುಗೆ ತರಿಸುವಲ್ಲಿ ಸಹಕರಿಸಿದ್ದಾರೆ. ಇವರೆಲ್ಲರಿಗೂ ಶಾಲಾ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಶಾಲೆಗೆ ಭೇಟಿ ನೀಡಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಮುಖ್ಯಗುರು ಊರ್ಮಿಳಾ ಕೆ, ಸಹಶಿಕ್ಷಕರಾದ ನಾಗೇಶ್ ಪಾಟಾಳಿ, ಪವಿತ್ರ ಎಂ ಆರ್, ಅತಿಥಿ ಶಿಕ್ಷಕಿ ಸುಪ್ರೀತಾ ಹಾಗೂ ಗೌರವ ಶಿಕ್ಷಕಿ ವಿದ್ಯಾಲಕ್ಷ್ಮೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.