ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಬಾಂತಲಪ್ಪು ಜನ ಸೇವಾ ಸಮಿತಿ ಕುಂಬ್ರ ಇದರ ಆಶ್ರಯದಲ್ಲಿ ಕುಂಬ್ರದ ಮಾರ್ನೆಮಿದ ಗೌಜಿ ಆಯ್ದ ಸ್ಥಳಿಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆ ಸೆ.30ರಂದು ಸಂಜೆ ಕುಂಬ್ರ ಜಂಕ್ಷನ್ ನಲ್ಲಿ (ಕುಂಬ್ರ ಚೆನ್ನಪ್ಪ ರೈ ಮತ್ತು ಕುಂಬ್ರ ಜತ್ತಪ್ಪ ರೈ ಸ್ಮಾರಕ ಅಶ್ವತ್ಥ ಕಟ್ಟೆಯ ಬಳಿ) ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಸೆ.10ರಂದು ಸಂಜೆ ಕುಕ್ಕುಮುಗೇರು ಶ್ರೀ ಉಳ್ಳಾಕುಲು ಕ್ಷೇತ್ರ ರಾಜಮಾಡದಲ್ಲಿ ನಡೆಯಿತು. ರಾಜಮಾಡದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜಮಾಡ ಶ್ರೀ ಕ್ಷೇತ್ರದ ಮೊಕ್ತೇಸರ ವಿಜಯ ಕುಮಾರ್ ರೈ ಮುಗೇರು,ಬಾಂತಲಪ್ಪು ಜನ ಸೇವಾ ಸಮಿತಿ ಅಧ್ಯಕ್ಷ ರಕ್ಷಿತ್ ರೈ ಮುಗೇರು, ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಕೋಶಾಧಿಕಾರಿ ಅಶ್ರಫ್ ಉಜಿರೋಡಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ, ಸಂಘಟನಾ ಕಾರ್ಯದರ್ಶಿಗಳಾದ ಶೀನಪ್ಪ ನಾಯ್ಕ ಮತ್ತು ಮಹಮ್ಮದ್ ಬೊಳ್ಳಾಡಿ, ಸಮಿತಿ ಸದಸ್ಯರುಗಳಾದ ಹರ್ಷಿತ್ ಬೈರಮೂಲೆ,ಹರೀಶ್ ರೈ ಮುಗೇರು, ಕರುಣಾ ರೈ ಬಿಜಳ, ಗಂತ್ ದ ಗುರ್ಕಾರ್ ನಾರಾಯಣ ದರ್ಬೆತ್ತಡ್ಕ ಹಾಗೆ ಚೆನ್ನ ಬಿಜಳ, ತಾರಾನಾಥ್ ಬೊಳ್ಳಾಡಿ ಉಪಸ್ಥಿತರಿದ್ದರು.
ಇದು ಆಯ್ದ ಸ್ಥಳಿಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆಯಾಗಿದ್ದು ಇದರಲ್ಲಿ ವಿಜೇತರಾದವರಿಗೆ ೨ ಮುಡಿ ಅಕ್ಕಿ,ರನ್ನರ್ ಪ್ರಥಮ ಮತ್ತು ದ್ವಿತೀಯ ತಲಾ ೧ ಮುಡಿ ಅಕ್ಕಿ ಹಾಗೂ ಶಾಶ್ವತ ಫಲಕ ಹಾಗೇ ವಿಶೇಷವಾಗಿ ಮಾರ್ನೇಮಿಯ ವಿವಿಧ ಗುಂಪು ಹಾಗೂ ವೈಯಕ್ತಿಕ ವೇಷಗಳಿಗೂ ಪ್ರತ್ಯೇಕ ಸ್ಪರ್ಧೆ ನಡೆಸಿ ಪ್ರತ್ಯೇಕ ಬಹುಮಾನ ನೀಡಲಾಗುವುದು . ಕಾರ್ಯಕ್ರಮದಲ್ಲಿ ಮಾಜಿ ಸಂಸದರು, ಪುತ್ತೂರು, ಸುಳ್ಯ ಶಾಸಕರು,ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಬಾಂತಲಪ್ಪು ಜನ ಸೇವಾ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.