ಪುತ್ತೂರು: ಎಸ್.ಆರ್, ಕಂಬೈನ್ಸ್ ಪುತ್ತೂರು ಇವರ ಆಶ್ರಯದಲ್ಲಿ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ ತುಳು ಹಾಸ್ಯಮಯ ನಾಟಕ “ಕಥೆ ಎಡ್ಡೆಂಡು” ಸನ್ಮಾನ ಸಮಾರಂಭ ಮತ್ತು ಸಹಾಯಧನ ವಿತರಣೆ ಸೆ.14 ರಂದು ಪುತ್ತೂರು ಪುರಭವನದಲ್ಲಿ ಸಂಜೆ ಗಂಟೆ 5.30 ರಿಂದ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ಕುಮಾರ್ ರೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ದ.ಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುತ್ತಿಲ ಪರಿವಾರ ಸೇವಾ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ತಮನ್ವಿ ಸಿಲ್ಕ್ನ ಮಾಲಾಶ್ರೀ ವಿಜಿತ್ರವರು ಭಾಗವಹಿಸಲಿದ್ದಾರೆ.
ಸನ್ಮಾನ
ನಾಟಕ ರಚನೆಕಾರ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ರಂಗಭೂಮಿಯ ಸಂಗೀತ ನಿರ್ದೇಶಕ ಸುಬ್ರಹ್ಮಣ್ಯ ಕಾರಂತ ಹಾಗೂ ರಂಗಭೂಮಿ ವೇಷಾಭೂಷಣ ವಿನ್ಯಾಸಕರ ವೆಂಕಟೇಶ್ ಮಯ್ಯ ಖಂಡಿಗರವರಿಗೆ ಸನ್ಮಾನ ನಡೆಯಲಿದೆ ಎಂದು ಕಾರ್ಯಕ್ರಮದ ನಿರ್ವಹಕ ರವಿಚಂದ್ರ ರೈ ಕುಂಬ್ರ ಮತ್ತು ಪುತ್ತೂರು ಎಸ್.ಆರ್.ಕಂಬೈನ್ಸ್ನವರು ತಿಳಿಸಿದ್ದಾರೆ.