ಪುತ್ತೂರು: ಅಲ್ಪಕಾಲದ ಅಸೌಖ್ಯದಿಂದ ನಿಧನರಾದ ಪುತ್ತೂರು ವಕೀಲರ ಸಂಘದ ಸದಸ್ಯ ಮತ್ತು ವಕೀಲ ವೃತ್ತಿಯ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದ ತೀರ್ಥಪ್ರಸಾದ್ ಮುಂಗ್ಲಿಮನೆಯವರಿಗೆ ವಕೀಲರ ಸಂಘದ ವತಿಯಿಂದ ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ಸೆ.12ರಂದು ಶ್ರದ್ಧಾಂಜಲಿ ಸಭೆ ನಡೆಯಿತು.

ಸಭೆಯಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ದೇವರಾಜ್ ವೈ ಹೆಚ್, ವಕೀಲರ ಸಂಘದ ಮಾಜಿ ಅಧ್ಯಕ್ಷರುಗಳಾದ ಎ ಉದಯಶಂಕರ ಶೆಟ್ಟಿ, ಕೆ ಭಾಸ್ಕರ ಕೋಡಿಂಬಾಳ, ಹಿರಿಯ ವಕೀಲರಾದ ಗೌರಿಶಚಂದ್ರ ಶ್ಯಾನ್ಬಾಗ್, ಮಹಮ್ಮದ್ ಸಿದ್ದೀಕ್ ಕೆ ಮೊದಲಾದವರು ನುಡಿ ನಮನವನ್ನು ಸಲ್ಲಿಸಿದ್ದರು. ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ ಜಗನ್ನಾಥ ರೈ, ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ, ಪ್ರಧಾನ ವ್ಯವಹಾರಿಕ ಸಿವಿಲ್ ನ್ಯಾಯಾಧೀಶ ಶಿವಣ್ಣ ಹೆಚ್ ಆರ್, ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ, ಸಂಘದ ಉಪಾಧ್ಯಕ್ಷ ಮೋನಪ್ಪ ಎಂ, ಕೋಶಾಧಿಕಾರಿ ಮಹೇಶ್ ಕೆ ಸವಣೂರು, ಜೊತೆ ಕಾರ್ಯದರ್ಶಿ ಮಮತ ಸುವರ್ಣ, ಸಂಘದ ಮಾಜಿ ಅಧ್ಯಕ್ಷರಾದ ಮನೋಹರ ಕೆ ವಿ, ದೇವಾನಂದ ಕೆ , ಎಪಿಪಿ ಕವಿತಾ, ಸಂಘದ ಹಿರಿಯ ವಕೀಲರಾದ ಪಿ ಕೆ ಸತೀಶನ್, ಎನ್ ಕೆ ಜಗನ್ನಿವಾಸ್ ರಾವ್, ಪ್ರವೀಣ್ ಕುಮಾರ್ ಎಸ್, ಯು ಎಸ್ ನಾಗರಾಜ್, ಜಯಾನಂದ ಕೆ, ಸುರೇಶ್ ರೈ ಪಡ್ಡಂಬೈಲು, ರಾಘವ, ಎಜಿಪಿ ಉಲ್ಲಾಸ್ ಹೆಚ್, ಕೃಪಾಶಂಕರ ಪಿ, ಸೀಮಾ ನಾಗರಾಜ್, ಕಕ್ವೆ ಕೃಷ್ಣಪ್ಪ ಗೌಡ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.