ಪುತ್ತೂರು: ತೀಯಾ ಸಮಾಜ ಸೇವಾ ಸಮಿತಿ( ರಿ) ಪುತ್ತೂರು ಇದರ 2024 -25ನೇ ಸಾಲಿನ ವಾರ್ಷಿಕ ಮಹಾಸಭೆಯು ಏಳ್ಮುಡಿ ಮಹಾದೇವಿ ಸಂಕೀರ್ಣ ಇದರ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಜೆ.ಪಿ ಸಂತೋಷ್ ಮುರ ಇವರು ವಹಿಸಿದ್ದರು. ಹಿರಿಯರಾದ ಯತೀಂದ್ರನಾಥ ಸಂಟ್ಯಾರ್ ಇವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತೀಯಾ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೈಕ್ಷಣಿಕ ,ಕ್ರೀಡೆ ಹಾಗೂ ಕಲಾ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗೌರವ ಸಲಹೆಗಾರರಾದ ನಾರಾಯಣ ಸಾಲ್ಮರ, ಗೌರವಾಧ್ಯಕ್ಷರಾದ ಗೋಪಾಲಕೃಷ್ಣ. ಪಿವಿ , ಪ್ರಧಾನ ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ , ಉಪಾಧ್ಯಕ್ಷರಾದ ಯು.ಪಿ ರಾಜೇಶ್ , ನಿಂತಿಕಲ್ಲು ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ನಿಂತಿಕಲ್ಲು , ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ.ವಿ , ಕಾರ್ಯದರ್ಶಿ ಅಶ್ವಿನಿ ರಾಜೇಶ್ ಇವರು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ ಇವರು 20204- 25ನೇ ಸಾಲಿನ ಸಮಗ್ರ ವರದಿಯನ್ನು ವಾಚಿಸಿದರು. ಖಜಾಂಜಿ ಬಿ.ಎಂ. ಶ್ರೀಧರ್ ಇವರ ಅನುಮತಿ ಮೇರೆಗೆ ಪ್ರಭಾವತಿ ಅವರು 2024 -25ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು. ಕಾರ್ಯಕ್ರಮದಲ್ಲಿ ಶ್ರೀಪರ್ಣ ಜಿ ಗುಂಡ್ಯ ಪ್ರಾರ್ಥಿಸಿ, ಅಶ್ವಿನಿ ರಾಜೇಶ್ ರವರು ಸ್ವಾಗತಿಸಿದರು. ಪುರುಷೋತ್ತಮ ಕೇಪುಲು ವಂದಿಸಿದರು. ಮಲ್ಲಿಕಾ ಗೋಪಾಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮವು ಬೆಳಿಗ್ಗೆ ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮದೊಂದಿಗೆ, ಆರಂಭಗೊಂಡು ಪ್ರಸಾದ ವಿತರಣೆಯ ನಂತರ ಸಭಾ ಕಾರ್ಯಕ್ರಮವು ನಡೆಯಿತು.