ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

0

ರೂ 2.28 ಕೋಟಿ ನಿವ್ವಳ ಲಾಭ, 15% ಡಿವಿಡೆಂಟ್ ವಿತರಣೆ

ಮೂರ್ನಾಡು ಮತ್ತು ಗುತ್ತಿಗಾರಿನಲ್ಲಿ ನೂತನ ಶಾಖೆ ಪ್ರಾರಂಭ

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವರದಿ ವರ್ಷದಲ್ಲಿ ರೂ 232.66 ಕೋಟಿ ಠೇವಣಿ ಹೊಂದಿದ್ದು, ರೂ 223.05 ಕೋಟಿ ಸಾಲಗಳನ್ನು ಸದಸ್ಯರುಗಳಿಗೆ ವಿತರಿಸಿರುತ್ತದೆ. ದುಡಿಯುವ ಬಂಡವಾಳವು ರೂ 246.67 ಕೋಟಿ ಇದ್ದು ಸಂಘವು ಒಟ್ಟು ರೂ. 1,186 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರವನ್ನು ನಡೆಸಿ ಈ ಸಹಕಾರಿ ವರ್ಷದಲ್ಲಿ ರೂ. 2,28,33,791.65 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಟ್ ವಿತರಿಸುತ್ತಿದ್ದೇವೆ ಎಂದು ಸೊಸೈಟಿ ಅಧ್ಯಕ್ಷರಾದ ಕೆ.ಸಿ.ಸದಾನಂದ ಹೇಳಿದರು.

ಸುಳ್ಯ ಕೊಡಿಯಾಲಬೈಲ್ ನ ಗೌಡ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಗತಿಯ ವಿವರ ನೀಡಿದರು.

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 1997 ರಲ್ಲಿ ಗೌಡರ ಯುವ ಸೇವಾ ಸಂಘ ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟಿದ್ದು, ಪ್ರಾರಂಭದಲ್ಲಿ 435 ಸದಸ್ಯರಿಂದ ಪ್ರಾರಂಭವಾದ ಈ ಸಂಘದಲ್ಲಿ ಪ್ರಸ್ತುತ 21,201 ವಿವಿಧ ವರ್ಗದ ಸದಸ್ಯರಿದ್ದು, ಇವರಿಂದ ರೂ 5.04 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ. ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭದ್ರತಾ ಸಾಲ, ಗೃಹಸಾಲ, ವಾಣಿಜ್ಯ ಕಟ್ಟಡ ಸಾಲ, ಜಮೀನು ಖರೀದಿ ಸಾಲ. ಜಮೀನು ಅಡವು ಸಾಲ, ವೇತನ ಸಾಲ, ವ್ಯಾಪಾರ ಸಾಲ ಹಾಗೂ ಜಾಮೀನು ಸಾಲಗಳನ್ನು ನೀಡುತ್ತಿದ್ದು, ಇ-ಸ್ಟಾಂಪಿಂಗ್ ವಿತರಣೆ, RTGS/NEFT ಸೌಲಭ್ಯವನ್ನು ನೀಡುತ್ತಿದ್ದೇವೆ. ಸಂಸ್ಥೆಯ ಕಾರ್ಯವ್ಯಾಪ್ತಿಯು ರಾಜ್ಯಮಟ್ಟದಾಗಿದ್ದು, ಸಂಘವು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ 23 ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ. ಎಂದು ಹೇಳಿದ ಅವರು ವರದಿ ವರ್ಷದಲ್ಲಿ ನಮ್ಮ ಸಹಕಾರಿ ಸಂಘವು ರೂ 232.66 ಕೋಟಿ ಠೇವಣಿ ಹೊಂದಿದ್ದು, ರೂ 223.05 ಕೋಟಿ ಸಾಲಗಳನ್ನು ಸದಸ್ಯರುಗಳಿಗೆ ವಿತರಿಸಿರುತ್ತದೆ. ದುಡಿಯುವ ಬಂಡವಾಳವು ರೂ 246.67 ಕೋಟಿ ಇದ್ದು ಸಂಘವು ಒಟ್ಟು ರೂ. 1,186 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರವನ್ನು ನಡೆಸಿ ಈ ಸಹಕಾರಿ ವರ್ಷದಲ್ಲಿ ರೂ. 2,28,33,791.65 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಟ್ ವಿತರಿಸುತ್ತಿದ್ದೇವೆ. ಸಂಘದಲ್ಲಿ ಒಟ್ಟು ರೂ. 3,37,39,671.74 ಕ್ಷೇಮನಿಧಿ ಹಾಗೂ ರೂ. 8,06,57,165.8 ಇತರ ನಿಧಿ ಇರುತ್ತದೆ. ಪ್ರಸ್ತುತ ಸಂಘದಲ್ಲಿ ರೂ. 4,18,25,881.52 ಮೌಲ್ಯದ ಚರಾಸ್ಥಿ ಹಾಗೂ ರೂ. 2,40,93,469.32 ಸ್ಥಿರಾಸ್ಥಿ ಇರುತ್ತದೆ. ಸಂಘಕ್ಕೆ ಸುಳ್ಯದ ಮೊಗರ್ಪಣಿಯಲ್ಲಿ ಮುಖ್ಯ ರಸ್ತೆ ಪಕ್ಕ 36.25 ಸೆಂಟ್ಸ್ ಸ್ವಂತ ಸ್ಥಳ ಇದ್ದು, ಈ ಜಾಗದಲ್ಲಿ ಸಂಘಕ್ಕೆ ಸುಸಜ್ಜಿತವಾದ ವಾಣಿಜ್ಯ ಮಳಿಗೆಗಳನ್ನೊಳಗೊಂಡ ಕಟ್ಟಡವನ್ನು ನಿರ್ಮಿಸಿರುತ್ತೇವೆ. ನೆಲ ಅಂತಸ್ತಿನಲ್ಲಿ ಸುಳ್ಯ ಶಾಖೆ ಕಾರ್ಯ ನಿರ್ವಹಿಸುತ್ತಿದ್ದು, 1 ನೇ ಮಹಡಿಯಲ್ಲಿ ವಿಶಾಲವಾದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಕಛೇರಿ, ಸಭಾಭವನ, ಅತಿಥಿಗೃಹ ನಿರ್ಮಿಸಿರುತ್ತೇವೆ. ಹಾಗೂ ಇದೀಗ ರೂ 1.47 ಕೋಟಿ ವೆಚ್ಚದಲ್ಲಿ ಸಂಘಕ್ಕೆ 2 ನೇ ಮಹಡಿಯನ್ನು ನಿರ್ಮಿಸುತ್ತಿದ್ದು, ಇದರ ಕೆಲಸ ಕಾರ್ಯಗಳು ಪ್ರಗತಿಯಲ್ಲಿರುತ್ತದೆ.


ಸಂಘದ ಹೆಚ್ಚಿನ ಎಲ್ಲಾ ಶಾಖೆಗಳಲ್ಲಿ ಇ ಸ್ಟಾಂಪಿಂಗ್ ವಿತರಣೆ ಮಾಡುತ್ತಿದ್ದು, ಸುಳ್ಯ ಶಾಖೆಯಲ್ಲಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯವನ್ನು ಸದಸ್ಯರಿಗೆ ನೀಡುತ್ತಿದ್ದೇವೆ. ಅಲ್ಲದೇ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95 ಕ್ಕಿಂತ ಅಧಿಕ ಅಂಕ ಪಡೆದ ನಮ್ಮ ಸಂಘದ ಸದಸ್ಯರ 40 ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಮಾಡಿರುತ್ತೇವೆ ಎಂದರು. ಗ್ರಾಹಕರ ಅನುಕೂಲಕ್ಕಾಗಿ ಚಿನ್ನಾಭರಣ ಸಾಲದ ಮಿತಿಯನ್ನು ರೂ. 10 ಲಕ್ಷದಿಂದ 25 ಲಕ್ಷಕ್ಕೆ ಏರಿಸಲಾಗಿದೆ.ರೂ 25 ಲಕ್ಷದ ತನಕ ಚಿನ್ನ ಖರೀದಿ ಸಾಲ ಎಂಬ ಹೊಸ ಸಾಲ ಯೋಜನೆಯನ್ನು ಆರಂಭಿಸಿದ್ದೇವೆ. ಸಂಘವು ಈಗಾಗಲೇ ಮಾಡುತ್ತಿರುವ ಆರ್ಥಿಕ ಚಟುವಟಿಕೆಯೊಂದಿಗೆ ವಾಣಿಜ್ಯ, ವ್ಯಾಪಾರ ಇತ್ಯಾದಿ ವ್ಯವಹಾರಗಳನ್ನು ಮಾಡುವರೆ ಬೈಲಾ ತಿದ್ದುಪಡಿಯ ಮಂಜೂರಾತಿ ಬಳಿಕ ಸಂಘದ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯಗತಗೊಳಿಸಲು ಉತ್ಸುಕರಾಗಿದ್ದೇವೆ. ವಾಹನ ಖರೀದಿಸುವ ಗ್ರಾಹಕರಿಗೆ ತ್ವರಿತಗತಿಯ ಸಾಲ ನೀಡುವರೇ ಪ್ರತಿ ಗುರುವಾರ ಸಭೆ ನಡೆಸಿ ಮಂಜೂರಾತಿ ನೀಡುತ್ತಿದ್ದೇವೆ.  ಸಂಘದ ಸದಸ್ಯರು ಕೊಡಿಯಾಲಬೈಲ್‌ನಲ್ಲಿರುವ ಗೌಡ ಸಮುದಾಯ ಭವನದಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದಾದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು. ಸಿಬ್ಬಂದಿಗಳ ಆರೋಗ್ಯದ ಸುರಕ್ಷತೆಗಾಗಿ ಸಂಸ್ಥೆಯ “ಆರೋಗ್ಯ ನಿಧಿ”ಯನ್ನು ಸಿಬ್ಬಂದಿಗಳ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. ಸಂಘದ ಮುಂದಿನ ಯೋಜನೆಯಾಗಿ ಕಾರ್ಯವ್ಯಾಪ್ತಿಯ ಕೊಡಗು ಜಿಲ್ಲೆಯ ಮೂರ್ನಾಡು ಹಾಗೂ ಸುಳ್ಯ ತಾಲೂಕಿನ ಗುತ್ತಿಗಾರ್‌ನಲ್ಲಿ ಶಾಖೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು ಕೆಲಸ ಕಾರ್ಯಗಳನ್ನು ಪ್ರಾರಂಭಿಸಿರುತ್ತೇವೆ. ನಮ್ಮ ಸಂಘವು ಜನರಲ್ಲಿ ಉಳಿತಾಯ ಮನೋಭಾವನೆಯನ್ನು ಬೆಳೆಸುವುದು, ಕೃಷಿಕರು, ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಒದಗಿಸುವುದು, ಮತ್ತು ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ನೆರವಾಗುವ ಉದ್ದೇಶವನ್ನು ಹೊಂದಿದೆ. ಸಹಕಾರಿ ಬಂಧುಗಳು ನಮ್ಮ ಸಹಕಾರಿ ಸಂಘದಲ್ಲಿ ವ್ಯವಹರಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕೆ.ಸಿ.ಸದಾನಂದರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ದಿನೇಶ ಮಡಪ್ಪಾಡಿ,ನಿರ್ದೇಶಕರುಗಳಾದ :ಪಿ.ಸಿ. ಜಯರಾಮ, ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರ ಕೋಲ್ಟಾರ್. ಪಿ.ಎಸ್. ಗಂಗಾಧರ, ಲಕ್ಷ್ಮೀನಾರಾಯಣ ನಡ್ಕ, ಮೋಹನ್‌ರಾಂ ಸುಳ್ಳಿ, ದಾಮೋದರ ನಾರ್ಕೋಡು, ಜಯಲಲಿತಾ ಕೆ.ಎಸ್.,ನಳಿನಿ ಸೂರಯ್ಯ ,ಶೈಲೇಶ್ ಅಂಬೆಕಲ್ಲು, ದೊಡ್ಡಣ್ಣ ಬರೆಮೇಲು, ಪ್ರೇಮ ಕೆ ಎಲ್. ಜ್ಞಾನೇಶ್ ಎನ್ ಎ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ ಉಪಸ್ಥಿತರಿದ್ದರು.

ಸಂಘದ 28ನೇ ವಾರ್ಷಿಕ ಮಹಾಸಭೆ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಅಧ್ಯಕ್ಷರಾದ ಕೆ.ಸಿ.ಸದಾನಂದರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಗತ ವರ್ಷದಲ್ಲಿ ಮೃತಪಟ್ಟ ಸದಸ್ಯರುಗಳಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ವಿವಿಧ ಮಂಡನೆಗಳಿಗೆ ಅನುಮೋದನೆ ಪಡೆಯಲಾಯಿತು. ಎಸ್ ಎಸ್ ಎಲ್ ಸಿ .ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ ವಂದಿಸಿದರು. ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here